ADVERTISEMENT

ಬುದ್ಧಿವಾದ ಹೇಳಿದ್ದಕ್ಕೆ ವಿಷ ಸೇವಿಸಿ ಬಾಲಕಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 4:30 IST
Last Updated 30 ಜನವರಿ 2026, 4:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಖಾನಾಪುರ: ಮನೆಯ ಹಿರಿಯರು ತನಗೆ ನಿಯಮಿತವಾಗಿ ಮನೆಕೆಲಸ ಹಾಗೂ ಹೊಲದ ಕೆಲಸ ಮಾಡಲು ಹೇಳಿದ್ದರಿಂದ ಮನನೊಂದ ಬಾಲಕಿ ಮಾನಸಿಕ ಖಿನ್ನತೆಗೆ ಒಳಗಾಗಿ ಮನೆಯಲ್ಲಿದ್ದ ಕೀಟನಾಶಕ ಸೇವಿಸಿ ಮೃತಪಟ್ಟ ಘಟನೆ ತಾಲ್ಲೂಕಿನ ಮುಗಳಿಹಾಳ ಗ್ರಾಮದಲ್ಲಿ ಗುರುವಾರ ವರದಿಯಾಗಿದೆ.

ಮುಗಳಿಹಾಳದ ಅಕ್ಷತಾ ರುದ್ರಯ್ಯ ಹಿರೇಮಠ (14) ಮೃತ ಬಾಲಕಿ. ಈಕೆ ಬುಧವಾರದಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಲಕಿಯ ತಂದೆ ರುದ್ರಯ್ಯ ಹಿರೇಮಠ ನಂದಗಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ADVERTISEMENT

ವಿಷ ಸೇವಿಸಿ ರೈತ ಸಾವು: ಮದ್ಯದ ಅಮಲಿನಲ್ಲಿ ಕೀಟನಾಶಕ ಸೇವಿಸಿದ ರೈತರೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ಗುರುವಾರ ತಾಲ್ಲೂಕಿನ ಸುರಪುರ ಗ್ರಾಮದಲ್ಲಿ ವರದಿಯಾಗಿದೆ.

ಗ್ರಾಮದ ನಿವಾಸಿ, ಕೃಷಿಕ ಕೆಂಚಪ್ಪ ಅಂಬಿ (65) ಮೃತ ರೈತ. ಕೆಂಚಪ್ಪ ಅವರಿಗೆ ವಿಪರೀತ ಮದ್ಯಪಾನದ ವ್ಯಸನವಿತ್ತು. ಮೂರು ದಿನಗಳ ಹಿಂದೆ ಮದ್ಯ ಸೇವಿಸಿದ ಅಮಲಿನಲ್ಲಿ ಮನೆಯಲ್ಲಿದ್ದ ಕೀಟನಾಶಕ ಸೇವಿಸಿದ್ದರು. ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಗುರುವಾರ ಮೃತಪಟ್ಟಿದ್ದಾರೆ ಎಂದು ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.