ADVERTISEMENT

ಬಸ್ ನಿಲ್ದಾಣದ ಗುಂಡಿ ಮುಚ್ಚಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 14:50 IST
Last Updated 13 ಜೂನ್ 2025, 14:50 IST
ಬೈಲಹೊಂಗಲ ಕೇಂದ್ರ ಬಸ್ ನಿಲ್ದಾಣ ಪ್ರವೇಶಿಸುವ ಮುಖ್ಯ ದ್ವಾರದ ರಸ್ತೆ ತಗ್ಗು, ಗುಂಡಿಗಳಿಂದ ಆವರಿಸಿದೆ. ಕೂಡಲೇ ಗುಂಡಿ ಮುಚ್ಚಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.
ಬೈಲಹೊಂಗಲ ಕೇಂದ್ರ ಬಸ್ ನಿಲ್ದಾಣ ಪ್ರವೇಶಿಸುವ ಮುಖ್ಯ ದ್ವಾರದ ರಸ್ತೆ ತಗ್ಗು, ಗುಂಡಿಗಳಿಂದ ಆವರಿಸಿದೆ. ಕೂಡಲೇ ಗುಂಡಿ ಮುಚ್ಚಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.   

ಬೈಲಹೊಂಗಲ: ಪಟ್ಟಣದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಘಟಕದ ಕೇಂದ್ರ ಬಸ್ ನಿಲ್ದಾಣ ಪ್ರವೇಶಿಸುವ ಎರಡು ಬದಿಯ ಮುಖ್ಯ ದ್ವಾರಗಳಲ್ಲಿ ತಗ್ಗು, ಗುಂಡಿ ಬಿದ್ದಿದ್ದು ಬಸ್‌ಗಳ ಓಡಾಟಕ್ಕೆ, ಪ್ರಯಾಣಿಕರಿಗೆ, ಸಾರ್ವಜನಕರಿಗೆ ತೊಂದರೆ ಆಗಿದೆ. ಕೂಡಲೇ ಗುಂಡಿ ಮುಚ್ಚಿಸುವಂತೆ ಪ್ರಯಾಣಿಕರು, ನಾಗರಿಕರು ಆಗ್ರಹಿಸಿದ್ದಾರೆ.

ಈ ಹಿಂದೆ ಸಣ್ಣ ಪ್ರಮಾಣದಲ್ಲಿ ಬಿದ್ದಿದ್ದ ಗುಂಡಿಗಳು ಮಳೆಯಿಂದ ಬಾಯಿ ತೆರೆದಿದ್ದು ನಾಗರಿಕರ, ಬಸ್‌ಗಳ ಓಡಾಟಕ್ಕೆ ಅಡಚಣೆ ಉಂಟು ಮಾಡಿದೆ. ಈ ಕುರಿತು ಘಟಕ ವ್ಯವಸ್ಥಾಪಕರಿಗೆ, ಸಿಬ್ಬಂದಿಗಳಿಗೆ ತಿಳಿಸಿದರೂ ಗಮನ ಹರಿಸುತ್ತಿಲ್ಲ. ಇದರಿಂದ ಮಳೆ ನೀರು ಗುಂಡಿಗಳಲ್ಲಿ ಸಂಗ್ರಹವಾಗಿ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಬಿದ್ದು ಗಾಯಗೊಳ್ಳುತ್ತಿದ್ದಾರೆ. ದಿನನಿತ್ಯದ ಬಸ್ಸುಗಳ ಓಡಾಟಕ್ಕೆ ತೊಂದರೆ ಆಗಿದೆ. ಬಸ್ ಚಾಲಕ, ನಿರ್ವಾಹಕರು ಬಸ್ ನಿಲ್ದಾಣ ಆವರಣದಲ್ಲಿ ಉದ್ಭವಿಸಿರುವ ಮೊಣಕಾಲುದ್ದದ ಗುಂಡಿಗಳಿಂದ ಜನರು ಬೇಸತ್ತು ಹೋಗಿದ್ದಾರೆ. ಗುಂಡಿಗಳಲ್ಲಿನ ಮಳೆ ನೀರು ಬಸ್ ಸಾಗುವಾಗ ಪಾದಚಾರಿಗಳಿಗೆ ತಾಗಿ ತೊಂದರೆ ಉಂಟಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಬಸ್ ನಿಲ್ದಾಣ ಆವರಣದಲ್ಲಿ ಉದ್ಭವಿಸಿರುವ ಗುಂಡಿ ಮುಚ್ಚಿಸಬೇಕು. ಬಸ್‌ಗಳು ರಸ್ತೆಗೆ ತಾಗುವಂತೆ ಅವೈಜ್ಞಾನಿಕವಾಗಿ ಡಾಂಬರೀಕರಣ ಹಾಕಿ ರಸ್ತೆ ಮಾಡಿರುವುದನ್ನು ತಕ್ಷಣ ಸರಿಪಡಿಸಬೇಕು. ಸಾರ್ವಜನಿಕ ಆಸ್ತಿ ಆಗಿರುವ ಬಸ್‌ಗಳ ಅವೈಜ್ಞಾನಿಕ ರಸ್ತೆಯಿಂದ ಹಿಂಬದಿಯಲ್ಲಿ ರಸ್ತೆಗೆ ತಾಗಿ ಸಾಗುತ್ತಿರುವುದರಿಂದ ಬಸ್‌ಗಳಿಗೆ ಆಗುತ್ತಿರುವ ಹಾನಿ ಸರಿಪಡಿಸಬೇಕು ಎಂದು ಸಮಾಜ ಸೇವಕ ಪರುಶರಾಮ ರಾಯಬಾಗ, ಸಂಜು ಹೊಸೂರ, ಶಿವಾನಂದ ಕುಲಕರ್ಣಿ, ಜಗದೀಶ ಕತ್ತಿ ಆಗ್ರಹಿಸಿದ್ದಾರೆ.

ಬೈಲಹೊಂಗಲ ಕೇಂದ್ರ ಬಸ್ ನಿಲ್ದಾಣ ಪ್ರವೇಶಿಸುವ ಮುಖ್ಯ ದ್ವಾರದ ರಸ್ತೆ ತಗ್ಗು ಗುಂಡಿಗಳಿಂದ ಆವರಿಸಿದೆ. ಕೂಡಲೇ ಗುಂಡಿ ಮುಚ್ಚಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT