ADVERTISEMENT

ಜೈವಿಕ ಇಂಧನ ಬಳಸಲು ಸಲಹೆ: ಹನಮಾಪೂರದ ಅಮರೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 8:13 IST
Last Updated 8 ಅಕ್ಟೋಬರ್ 2020, 8:13 IST
ತೆಲಸಂಗ ಗ್ರಾಮದಲ್ಲಿ ರೈತ ಮಿತ್ರ ಬಯೊ ಡೀಸೆಲ್ ಮಾರಾಟ ಮಳಿಗೆಗೆ ಶ್ರೀಗಳು ಹಾಗೂ ಗಣ್ಯರು ಚಾಲನೆ ನೀಡಿದರು
ತೆಲಸಂಗ ಗ್ರಾಮದಲ್ಲಿ ರೈತ ಮಿತ್ರ ಬಯೊ ಡೀಸೆಲ್ ಮಾರಾಟ ಮಳಿಗೆಗೆ ಶ್ರೀಗಳು ಹಾಗೂ ಗಣ್ಯರು ಚಾಲನೆ ನೀಡಿದರು   

ತೆಲಸಂಗ: ‘ಆಧುನಿಕ ಜಗತ್ತಿನಲ್ಲಿ ದಿನ ನಿತ್ಯದ ಬಳಕೆಗೆ ಅಗತ್ಯವಾಗಿರುವ ವಸ್ತುಗಳಲ್ಲಿ ಇಂಧನವೂ ಒಂದಾಗಿದೆ. ರೈತರು ಕೃಷಿ ಚಟುವಟಿಕೆಗಳಿಗೆ ಬಳಸುವ ಯಂತ್ರಗಳಿಗೆ ಬೇಕಿರುವ ಇಂಧನ ಖರೀದಿಗೆ ಬಂಕ್ ಹುಡುಕಿಕೊಂಡು ಹೋಗಬೇಕಿತ್ತು. ಈಗ ಜೈವಿಕ ಇಂಧನ (ಬಯೊ ಡೀಸೆಲ್)ವನ್ನು ಹಳ್ಳಿಗಳಲ್ಲಿನ ಅಂಗಡಿಯಲ್ಲಿಟ್ಟು ಮಾರಾಟ ಮಾಡಬಹುದಾಗಿದೆ. ಇದನ್ನು ಭವಿಷ್ಯದ ಇಂಧನ ಎಂದೇ ಬೀಂಬಿಸಲಾಗುತ್ತಿದೆ’ ಎಂದು ಹನಮಾಪೂರದ ಅಮರೇಶ್ವರ ಸ್ವಾಮೀಜಿಗಳು ಹೇಳಿದರು.

ಗ್ರಾಮದಲ್ಲಿ ರೈತ ಮಿತ್ರ ಬಯೊ ಡಿಸೆಲ್ ಮಾರಾಟ ಮಳಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಎಲ್ಲೆಡೆ ಇಂಧನದ ಕೊರತೆ ತಲೆದೋರುತ್ತಿದೆ. ಸದ್ಯಕ್ಕೆ ಪರಿಸರ ಕಾಳಜಿಯ ಈ ಇಂಧನ ಯಂತ್ರಗಳಿಗೂ ಅನುಕೂಲವಾಗಿದೆ. ಇದರಿಂದ ಸಮಯ ಹಾಗೂ ಹಣ ಉಳಿತಾಯವಾಗಲಿದೆ’ ಎಂದರು.

ADVERTISEMENT

ಹಿರೇಮಠದ ವೀರೇಶ್ವರ ದೇವರು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಹಿರಿಯರಾದ ಐ.ಎಲ್. ಕುಮಠಳ್ಳಿ, ಅರವಿಂದ ಉಂಡೋಡಿ, ಅಮೋಘ ಖೊಬ್ರಿ, ಈಶ್ವರ ಉಂಡೋಡಿ, ಜಗದೀಶ ಮಠದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.