ADVERTISEMENT

ವೀರಶೈವ–ಲಿಂಗಾಯತರು ಒಳಪಂಗಡ ಮರೆತು ಸಂಬಂಧ ಬೆಳೆಸಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:15 IST
Last Updated 8 ಡಿಸೆಂಬರ್ 2019, 20:15 IST
ಬೆಳಗಾವಿಯಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ವಧು–ವರ ಪಾಲಕರ ಸಮಾವೇಶವನ್ನು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು
ಬೆಳಗಾವಿಯಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ವಧು–ವರ ಪಾಲಕರ ಸಮಾವೇಶವನ್ನು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು   

ಬೆಳಗಾವಿ: ‘ವೀರಶೈವ– ಲಿಂಗಾಯತರು ಒಳಪಂಗಡಗಳನ್ನು ಮರೆತು, ಸಂಬಂಧ ಬೆಳೆಸಿದರೆ ಶರಣ ಧರ್ಮದ ಆಶಯ ನೆರವೇರುತ್ತದೆ’ ಎಂದು ರಾಜಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.

ಇಲ್ಲಿ ವೀರಶೈವ ಲಿಂಗಾಯತ ವಧು–ವರರ ಅನ್ವೇಷಣ ಕೇಂದ್ರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಸಹಯೋಗದಲ್ಲಿ ಭಾನುವಾರ ನಡೆದ 58ನೇ ವೀರಶೈವ ಲಿಂಗಾಯತ ವಧು–ವರರ ಪಾಲಕರ ಸಮಾವೇಶದಲ್ಲಿ ಮಾತನಾಡಿದರು.

‘ಅಂಗದ ಮೇಲೆ ಲಿಂಗ ಧರಿಸಿದವರೆಲ್ಲರನ್ನು ಕೂಡಲಸಂಗಯ್ಯನೆಂಬ ಭಾವನೆಯನ್ನು ಹೊಂದಿದರೆ, ಸಮಾಜದಲ್ಲಿ ಐಕ್ಯತೆ ಬೆಳೆಯಲಿದೆ. ಸಮಾಜವೂ ಸಹ ಸಂಘಟಿತಗೊಳ್ಳುತ್ತದೆ. ಈ ದಿಸೆಯಲ್ಲಿ ಸಮಾವೇಶದಲ್ಲಿ ಪಾಲಕರು ಚಿಂತಿಸಬೇಕು‘ ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ‘ವಧು–ವರ ಹಾಗೂ ಪಾಲಕರು ಆಸ್ತಿ, ಅಂತಸ್ತು, ಅಧಿಕಾರ, ಜಾತಿ ಉಪ ಜಾತಿಗಳಿಗೆ ಆದ್ಯತೆ ನೀಡದೇ, ಮನೆತನದ ಸಂಸ್ಕಾರ, ಆರೋಗ್ಯದ ಬಗ್ಗೆ ಮಹತ್ವ ನೀಡಬೇಕು. ವೈವಾಹಿಕ ಸಂಬಂಧಗಳನ್ನು ಬೆಸೆಯಬೇಕು’ ಎಂದು ತಿಳಿಸಿದರು.

ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ಡಾ.ರತ್ನಪ್ರಬಾ ಬೆಲ್ಲದ ಪ್ರಾಸ್ತಾವಿಕ ಮಾತನಾಡಿದರು. ಮುಖಂಡರಾದ ಸಿದ್ದನಗೌಡ ಪಾಟೀಲ, ಬಿ.ವಿ. ಕಟ್ಟಿ, ಪ್ರಕಾಶ ಬಾಳೇಕುಂದ್ರಿ, ಡಾ.ಗುರುದೇವಿ ಹುಲ್ಲಪ್ಪನವರಮಠ, ವಕೀಲ ಎಂ.ಬಿ. ಝಿರಲಿ, ಡಾ.ವಿಜಯಾ ಪುಟ್ಟಿ, ಡಾ.ಜಯಾ ಜಾಲಿಹಾಳ, ಆಶಾ ಪಾಟೀಲ ಇದ್ದರು.

ವಧು–ವರರ ಅನ್ವೇಷಣ ಕೇಂದ್ರ ಅಧ್ಯಕ್ಷ ಡಾ.ಎಫ್.ವಿ. ಮಾನ್ವಿ ಸ್ವಾಗತಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ಜಯಶೀಲಾ ಬ್ಯಾಕೋಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.