ADVERTISEMENT

ಸಂತ್ರಸ್ತರಿಗೆ ಉ.ಕ. ಟ್ರಸ್ಟ್ ಸದಸ್ಯರ ನೆರವು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 14:51 IST
Last Updated 14 ಆಗಸ್ಟ್ 2019, 14:51 IST
ಅಥಣಿಯ ನೆರೆ ಸಂತ್ರಸ್ತರಿಗೆ ವಿತರಿಸಲು ಲಾರಿಯಲ್ಲಿ ಸಾಮಗ್ರಿಗಳನ್ನು ತುಂಬಿಕೊಂಡು ಬಂದಿರುವ ಬೆಂಗಳೂರಿನ ಉತ್ತರ ಕರ್ನಾಟಕ ಗೆಳೆಯರ ಚಾರಟೇಬಲ್ ಟ್ರಸ್ಟ್‌ ಸದಸ್ಯರು  
ಅಥಣಿಯ ನೆರೆ ಸಂತ್ರಸ್ತರಿಗೆ ವಿತರಿಸಲು ಲಾರಿಯಲ್ಲಿ ಸಾಮಗ್ರಿಗಳನ್ನು ತುಂಬಿಕೊಂಡು ಬಂದಿರುವ ಬೆಂಗಳೂರಿನ ಉತ್ತರ ಕರ್ನಾಟಕ ಗೆಳೆಯರ ಚಾರಟೇಬಲ್ ಟ್ರಸ್ಟ್‌ ಸದಸ್ಯರು     

ಅಥಣಿ: ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಈ ಭಾಗದ ಜನರು ಸ್ಥಾಪಿಸಿರುವ ಉತ್ತರ ಕರ್ನಾಟಕ ಗೆಳೆಯರ ಚಾರಟಬಲ್‌ ಟ್ರಸ್ಟ್‌ಸದಸ್ಯರುಅಥಣಿ ತಾಲ್ಲೂಕಿನ ವಿವಿಧ ಗ್ರಾಮಗಳ ಸಂತ್ರಸ್ತರಿಗೆ ಬುಧವಾರ ದಿನಬಳಕೆಯವಸ್ತುಗಳನ್ನುವಿತರಿಸಿದರು.

ಟ್ರಸ್ಟ್‌ನ ಸದಸ್ಯ ಶಂಕರ ಕಾಮಣ್ಣಮಾತನಾಡಿ, ‘ಟ್ರಸ್ಟ್‌ ಸದಸ್ಯರ ಒಂದು ತಿಂಗಳ ವೇತನವನ್ನು ಸಂಗ್ರಹಿಸಿ ಪ್ರವಾಹ ಸಂತ್ರಸ್ತರಿಗೆ ನೆರವು ಕಲ್ಪಿಸುತ್ತಿದ್ದೇವೆ.10 ಲಾರಿಗಳಲ್ಲಿ ಆಹಾರ ಪದಾರ್ಥ ಹಾಗೂ ಇನ್ನಿತರ ದಿನಬಳಕೆಯ ವಸ್ತುಗಳನ್ನುತುಂಬಿಕೊಂಡು ಒಂದು ವಾರದಿಂದವಿವಿಧ ಜಿಲ್ಲೆಯ ಸಂತ್ರಸ್ತರಿಗೆ ಅವುಗಳನ್ನು ತಲುಪಿಸುತ್ತಿದ್ದೇವೆ’ ಎಂದು ತಿಳಿಸಿದರು.

ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದ ಸವದಿ ಮಾತನಾಡಿ, ಟ್ರಸ್ಟ್‌ನ ಸದಸ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಕೀಲ ಅಮೋಘ ಕೊಬರಿ,ಅಮರ ದುರ್ಗಣ್ಣವರ, ಬಸವರಾಜ ಸಿಂದಗಿ, ದೀಪಕ ಸಾಳವೆ, ವಿಜಯಕುಮಾರ ತೇರದಾಳ, ಪ್ರವೀಣ ದುರ್ಗಣ್ಣವರ, ಪ್ರಬಾಕರ ಲಾಡರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.