ADVERTISEMENT

ವಿಧಾನ ಪರಿಷತ್‌ ಚುನಾವಣೆ| ಇಡೀ ದಿನ ಸೋಲು– ಗೆಲುವಿನ ಲೆಕ್ಕಾಚಾರ

ಪದವೀಧರ ಕ್ಷೇತ್ರದಲ್ಲಿ 11, ಶಿಕ್ಷಕರ ಅಖಾಡದಲ್ಲಿ 12 ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 19:30 IST
Last Updated 14 ಜೂನ್ 2022, 19:30 IST
ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ತೆರೆದ ವಿಧಾನ ಪರಿಷತ್‌ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ ಸಿಬ್ಬಂದಿ ಸಿದ್ಧತೆಯಲ್ಲಿ ತೊಡಗಿದ್ದು ಮಂಗಳವಾರ ಕಂಡುಬಂತು
ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ತೆರೆದ ವಿಧಾನ ಪರಿಷತ್‌ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ ಸಿಬ್ಬಂದಿ ಸಿದ್ಧತೆಯಲ್ಲಿ ತೊಡಗಿದ್ದು ಮಂಗಳವಾರ ಕಂಡುಬಂತು   

ಬೆಳಗಾವಿ: ವಾಯವ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಿಂದಈಬಾರಿವಿಧಾನ ಪರಿಷತ್‌ಗೆ ಯಾರು ಹೋಗಲಿದ್ದಾರೆಎಂಬಲೆಕ್ಕಾಚಾರಈಗಎಲ್ಲಕಡೆಶುರುವಾಗಿದೆ.

ಎರಡುರಾಷ್ಟ್ರೀಯಪಕ್ಷಗಳೂಸೇರಿದಂತೆಒಟ್ಟು23ಅಭ್ಯರ್ಥಿಗಳು ಈ ಅಖಾಡದಲ್ಲಿ ಇದ್ದಾರೆ. ತುಂಬ ತುರುಸಿನಿಂದ ಮತದಾನ ನಡೆದಿದೆ. ಹೀಗಾಗಿ, ಎಲ್ಲ ಅಭ್ಯರ್ಥಿಗಳೂ ಗೆಲ್ಲುವ ಉಮೇದಿನಲ್ಲಿದ್ದಾರೆ. ಕೊನೆಗೆ, ಮತದಾರ ಪ್ರಭು ಯಾರ ಕೊರಳಿಗೆ ವಿಜಯ ಮಾಲೆ ಹಾಕಲಿದ್ದಾನೆ ಎಂಬುದು ಇನ್ನೂ ಗುಟ್ಟಾಗಿ ಉಳಿದಿದೆ.

ಸೋಮವಾರ ರಾತ್ರಿಯಿಂದ ಆರಂಭವಾದ ಕಾರ್ಯಕರ್ತರ ಲೆಕ್ಕಾಚಾರ ಬುಧವಾರವೂ ಮುಂದುವರಿದಿತ್ತು. ಯಾವ ಭಾಗದಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳಿಗೆ ಎಷ್ಟು ಮತಗಳು ಬಂದಿರಬಹುದು, ಯಾವ ಶಿಕ್ಷಣ ಸಂಸ್ಥೆಯವರು ತಮ್ಮೊಂದಿಗೆ ಇದ್ದಾರೆ ಎಂಬ ಕುತೂಹಲಕರ ಸಂಗತಿಗಳನ್ನು ತಾಳೆ ಹಾಕಿ ನೋಡುವುದು ಈಗ ಸಾಮಾನ್ಯವಾಗಿದೆ.

ADVERTISEMENT

ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳನ್ನು ಒಳಗೊಂಡ ಈ ಕ್ಷೇತ್ರದಲ್ಲಿ ತೀವ್ರ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿತ್ತು. ಬುಧವಾರ ಎಲ್ಲರ ಹಣೆಬರಹ ಹೊರಬೀಳುವ ಸಾಧ್ಯತೆ ಇದೆ.

ಪದವೀಧರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು: ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸುನೀಲ ಸಂಕ, ಬಿಜೆಪಿಯಿಂದ ಹಾಲಿ ಸದಸ್ಯ ಹಣಮಂತ ನಿರಾಣಿ, ಸರ್ವಜನತಾ ಪಕ್ಷದಿಂದ ಜಿ.ಸಿ.ಪಟೇಲ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಯಲ್ಲಪ್ಪ ಕಲಕುಟ್ರಿ, ಪಕ್ಷೇತರರಾಗಿ ಆದರ್ಶಕುಮಾರ ಪೂಜಾರಿ, ಘಟಿಗೆಪ್ಪ ಮಗದುಮ್ಮ, ದೀಪಿಕಾ ಎಸ್‌., ನಿಂಗಪ್ಪ ಭಜಂತ್ರಿ, ಭೀಮಸೇನ ಬಾಗಿ, ರಾಜನಗೌಡ ಪಾಟೀಲ, ಸುಭಾಷ ಕೋಟೆಕಲ್‌ ಸ್ಪರ್ಧಿಸಿದ್ದಾರೆ.

12 ಮಂದಿ ಶಿಕ್ಷಕರ ಕಣದಲ್ಲಿ: ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸದಸ್ಯ ಅರುಣ ಶಹಾಪುರ, ಕಾಂಗ್ರೆಸ್‌ನಿಂದ ಪ್ರಕಾಶ ಹುಕ್ಕೇರಿ, ಜೆಡಿಎಸ್‌ನಿಂದ ಚಂದ್ರಶೇಖರ ಲೋಣಿ, ಪಕ್ಷೇತರ ಅಭ್ಯರ್ಥಿಗಳಾಗಿ ಎನ್‌.ಬಿ.ಬನ್ನೂರ,ಶ್ರೀನಿವಾಸಗೌಡ ಗೌಡರ, ಅಪ್ಪಾಸಾಹೇಬ ಕುರಣೆ, ಚಂದ್ರಶೇಖರ ಗುಡಸಿ,ಬಸಪ್ಪ ಮಣಿಗಾರ, ಶ್ರೀಕಾಂತ ಪಾಟೀಲ,ಶ್ರೇಣಿಕ್‌ ಜಾಂಗಟೆ, ಸಂಗಮೇಶ ಚಿಕ್ಕನರಗುಂದ, ಜಯಪಾಲ ದೇಸಾಯಿ ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.