ADVERTISEMENT

ಕಲೆ, ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ಡಾ.ಅಲ್ಲಮಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 12:57 IST
Last Updated 2 ನವೆಂಬರ್ 2021, 12:57 IST
ಬೆಳಗಾವಿಯಲ್ಲಿ ಅಖಿಲ ಭಾರತ ಎಂಜಿನಿಯರ್‌ಗಳ ಸಂಸ್ಥೆ ಸ್ಥಳೀಯ ಕೇಂದ್ರದಿಂದ ಭಾನುವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಉದ್ಘಾಟಿಸಿದರು
ಬೆಳಗಾವಿಯಲ್ಲಿ ಅಖಿಲ ಭಾರತ ಎಂಜಿನಿಯರ್‌ಗಳ ಸಂಸ್ಥೆ ಸ್ಥಳೀಯ ಕೇಂದ್ರದಿಂದ ಭಾನುವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಉದ್ಘಾಟಿಸಿದರು   

ಬೆಳಗಾವಿ: ‘ಕಲೆ ಹಾಗೂ ಕಲಾವಿದರಿಗೆ ಸಮಾಜದ ಪ್ರೋತ್ಸಾಹ ಅಗತ್ಯ’ ಎಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ಅಖಿಲ ಭಾರತ ಎಂಜಿನಿಯರ್‌ಗಳ ಸಂಸ್ಥೆ ಸ್ಥಳೀಯ ಕೇಂದ್ರದಿಂದ ಭಾನುವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಅದರಂತೆ ಅಂಗವಿಕಲರಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರುವ ಕೆಲಸವನ್ನೂ ಮಾಡಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದರು.

ADVERTISEMENT

‘ಮಾನವ ಕಂಪ್ಯೂಟರ್’ ಎಂದೇ ಖ್ಯಾತರಾದ ಬಸವರಾಜ ಉಮರಾಣಿ ಅವರು ಗಣಿತದ ಕೌಶಲದ ಕುರಿತು ಮಾತನಾಡಿದರು. ‘ನಾದಸುಧಾ’ ಸುಗಮ ಸಂಗೀತ ಶಾಲೆಯ ಮುಖ್ಯಸ್ಥ ಸತ್ಯನಾರಾಯಣ ಅವರ ತಂಡದ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಪುನೀತ್ ರಾಜ್‌ಕುಮಾರ್ ಗೌರವಾರ್ಥ ‘ಕಾಣದಂತೆ ಮಾಯವಾದನು’ ಹಾಡನ್ನು ಸಾತ್ವಿಕ ಭಂಡಾರಿ ಹಾಡಿದರು. ಮಾನ್ಯಾ ಹಲಗಿ, ದಿವ್ಯಾ ಅಂಕಲೆ, ಬೇಬಿ ಧನ್ಯಾ ಹಾಗೂ ಡಾ.ಸಂಪ್ರೀತಾ ಭಾಗವಹಿಸಿದ್ದರು. ಪ್ರೇಮಾ ಉಪಾಧ್ಯೆ ನಿರ್ವಹಿಸಿದರು.

ನಿವೃತ್ತ ಎಂಜಿನಿಯರ್‌ಗಳಾದ ಬಿ.ಎ. ರಡ್ಡಿ ಹಾಗೂ ಎಸ್‌.ಜಿ. ಪುಣೇಕರ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ರಾಜ್ಯ ಸಂಸ್ಥೆಗೆ ಆಯ್ಕೆಯಾದ ಬಿ.ಜಿ. ಧರೆಣ್ಣಿ ಅವರನ್ನು ಗೌರವಿಸಲಾಯಿತು. ಅಧ್ಯಕ್ಷ ರಮೇಶ ಜಂಗಲ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಮಂಜುನಾಥ ಶರಣಪ್ಪನವರ ನಿರೂಪಿಸಿದರು. ಸಿ.ಬಿ. ಹಿರೇಮಠ ಹಾಗೂ ವೆಂಕಟೇಶ್ ಪರಿಚಯಿಸಿದರು. ಬಿ.ಜಿ. ಧರೆಣ್ಣಿ ವಂದಿಸಿದರು.

ಎಂಜಿನಿಯರ್‌ಗಳಾದ ವಿ.ಜಿ. ಜಾವೂರ, ಸಿ.ಎನ್. ವಾಲಿ, ಎಸ್.ಎಸ್. ಖಣಗಾವಿ, ಬಿ.ಡಿ. ಜಾಧವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.