ADVERTISEMENT

‘ಕನ್ನಡದ ಅಸ್ಮಿತೆ ಸದಾ ಇರಬೇಕು’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 11:30 IST
Last Updated 7 ನವೆಂಬರ್ 2020, 11:30 IST
ಬೆಳಗಾವಿಯ ಎಸ್‌ಜಿವಿ ಮಹೇಶ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೆಆರ್‌ಸಿಇಎಸ್ ಪದವಿ ಕಾಲೇಜಿನ ಪ್ರಾಚಾರ್ಯ ಜಿ.ಕೆ. ಗಾಂವ್ಕರ್ ಉದ್ಘಾಟಿಸಿದರು
ಬೆಳಗಾವಿಯ ಎಸ್‌ಜಿವಿ ಮಹೇಶ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೆಆರ್‌ಸಿಇಎಸ್ ಪದವಿ ಕಾಲೇಜಿನ ಪ್ರಾಚಾರ್ಯ ಜಿ.ಕೆ. ಗಾಂವ್ಕರ್ ಉದ್ಘಾಟಿಸಿದರು   

ಬೆಳಗಾವಿ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ನಮ್ಮಲ್ಲಿ ಕನ್ನಡದ ಅಸ್ಮಿತೆ ಸದಾ ಇರಬೇಕು’ ಎಂದು ಕೆಆರ್‌ಸಿಇಎಸ್ ಪದವಿ ಕಾಲೇಜಿನ ಪ್ರಾಚಾರ್ಯ ಜಿ.ಕೆ. ಗಾಂವ್ಕರ್ ಹೇಳಿದರು.

ಇಲ್ಲಿನ ಎಸ್‌ಜಿವಿ ಮಹೇಶ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ಕನ್ನಡ ಭಾವ-ವೈಭವ’ ಕಾರ್ಯಕ್ರಮ (ವರ್ಚುಯೆಲ್)ದಲ್ಲಿ ಅವರು ಮಾತನಾಡಿದರು.

‘ಕನ್ನಡದ ನೆಲದಲ್ಲಿ ಜನಿಸಿದ ನಾವು ಬೇರೆ ಬೇರೆ ಭಾಷೆಗಳನ್ನು ಗೌರವಿಸಬೇಕು. ಆದರೆ, ಕನ್ನಡ ನಮ್ಮ ಉಸಿರಾಗಿರಬೇಕು. ಕನ್ನಡ ಭಾಷೆಗೆ ನಶಿಸುವ ಆತಂಕವಿಲ್ಲ. ಆದರೆ, ಹೆಚ್ಚೆಚ್ಚು ಬಳಸುವಂತಾಗಬೇಕು. ಕನ್ನಡ ಮಾತನಾಡಲು ಹಿಂಜರಿಯುವ ಮನೋಭಾವ ಸರಿಯಲ್ಲ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ವಿ. ಭಟ್ಟ, ‘ಕನ್ನಡ ಕುಟುಂಬದ ಭಾಷೆ. ಅದು ನಮ್ಮ ಹಕ್ಕು. ಅದನ್ನು ಸದಾ ಬಳಸಿಕೊಳ್ಳಬೇಕು; ರಕ್ಷಿಸಿಕೊಳ್ಳಬೇಕು’ ಎಂದು ಆಶಿಸಿದರು.

ಮುಕುಂದ ಗೋಖಲೆ, ಅಭಿಜಿತ ಹಣಗೋಡಿಮಠ ಹಾಗೂ ವಿದ್ಯಾರ್ಥಿಗಳು ಮಾತನಾಡಿದರು.

ಪಾಲ್ಗೊಂಡಿದ್ದವರಿಗೆ ಕನ್ನಡ ಶಾಲು ಹಾಗೂ ಕನ್ನಡ ಪುಸ್ತಕ ನೀಡಲಾಯಿತು.

ವಿದ್ಯಾರ್ಥಿನಿ ಸುರಭಿ ಖೋತ್ ಪ್ರಾರ್ಥಿಸಿದರು. ಉಪ ಪ್ರಾಚಾರ್ಯ ಆನಂದ ಖೋತ್ ಸ್ವಾಗತಿಸಿದರು. ನರಸಿಂಹ ಭಟ್ಟ ಪರಿಚಯಿಸಿದರು. ಉಪನ್ಯಾಸಕ ರಾಜು ಭಟ್ಟ ನಿರೂಪಿಸಿದರು. ಉಪನ್ಯಾಸಕ ಮಹೇಶ ಢವಳೇಶ್ವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.