ADVERTISEMENT

ಕರಾಳ ದಿನ ಆಚರಿಸಿಯೇ ತೀರುತ್ತೇವೆ: ಎಂಇಎಸ್ ಮುಖಂಡ ದೀಪಕ ದಳವಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 16:31 IST
Last Updated 27 ಅಕ್ಟೋಬರ್ 2020, 16:31 IST

ಬೆಳಗಾವಿ: ‘ನಗರದಲ್ಲಿ ನ. 1ರಂದು ಕರಾಳ ದಿನ ಆಚರಿಸಿಯೇ ತೀರುತ್ತೇವೆ’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡ ದೀಪಕ ದಳವಿ ಹೇಳಿದರು.

ನಗರದ ಮರಾಠಾ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರದ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲಾಡಳಿತ ಅನುಮತಿ ನೀಡದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸಲಾಗುವುದು. ದೇವರು ಕರ್ನಾಟಕ ಪೊಲೀಸರಿಗೆ ಸದ್ಬುದ್ಧಿ ನೀಡಲಿ’ ಎಂದರು.

‘ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ನ.1ರಂದು ಬಹಳ ವರ್ಷಗಳಿಂದಲೂ ಕರಾಳ ದಿನ ಆಚರಿಸುತ್ತಾ ಬಂದಿದ್ದೇವೆ. ಈ ಬಾರಿಯೂ ಯಾವುದೇ ಕಾರಣಕ್ಕೂ ನಮ್ಮ ನಿರ್ಣಯ ಬದಲಿಸುವುದಿಲ್ಲ’ ಎಂದು ತಿಳಿಸಿದರು.

ADVERTISEMENT

ಸಮಿತಿಯ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ, ಮುಖಂಡರಾದ ಮಾಲೋಜಿರಾವ ಅಷ್ಟೇಕರ, ಸುರೇಶ ರಾಜುಕರ, ರಣಜಿತ ಚವಾಣ, ಪ್ರಕಾಶ ಮರಗಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.