ADVERTISEMENT

ಸವದತ್ತಿ | ಕಾಡುಹಂದಿ ಸೆರೆ: ಇಬ್ಬರಿಗೆ 1 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 2:48 IST
Last Updated 1 ಸೆಪ್ಟೆಂಬರ್ 2025, 2:48 IST
31-ಸವದತ್ತಿ-01 : ತಾಲೂಕಿನ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದ ಕಾಡುಹಂದಿ ಹಾಗೂ ಇಬ್ಬರು ಆರೋಪಿತರೊಂದಿಗೆ ವಲಯ ಅರಣ್ಯಾಧಿಕಾರಿ ಸಂಜೀವ ಸಂಶುದ್ಧಿ ಹಾಗೂ ಅಧಿಕಾರಿಗಳು.
31-ಸವದತ್ತಿ-01 : ತಾಲೂಕಿನ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದ ಕಾಡುಹಂದಿ ಹಾಗೂ ಇಬ್ಬರು ಆರೋಪಿತರೊಂದಿಗೆ ವಲಯ ಅರಣ್ಯಾಧಿಕಾರಿ ಸಂಜೀವ ಸಂಶುದ್ಧಿ ಹಾಗೂ ಅಧಿಕಾರಿಗಳು.   

ಸವದತ್ತಿ: ಕಾಡುಹಂದಿ ಹಿಡಿದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಒಂದು ಲಕ್ಷ ದಂಡ ವಿಧಿಸಿದೆ. ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಕಾಡುಹಂದಿಗೆ ಹಿಡಿದು ಮಾಂಸ ಮಾರಾಟದ ಆರೋಪದ ಮೇರೆಗೆ ಇಬ್ಬರನ್ನು ಶುಕ್ರವಾರ ಬಂಧಿಸಲಾಗಿದೆ. ಪ್ರಕರಣ ಶೀಘ್ರ ವಿಚಾರಣೆ ನಡಸಿದ ನ್ಯಾಯಾಲಯವು ದಂಡ ವಿಧಿಸಿ, ನ್ಯಾಯಾಂಗ ವಶಕ್ಕೆ ನೀಡಿದೆ.

ಸವದತ್ತಿ ಪ್ರಾದೇಶಿಕ ಅರಣ್ಯ ವಲಯದ ಕೆ.ವಾಯ್. ಆಲದಕಟ್ಟಿ ಅವರು ಮೀಸಲು ಅರಣ್ಯ ಪ್ರದೇಶದಲ್ಲಿ ಸೊಗಲ ಶಾಖೆಯ ಸಿಬ್ಬಂದಿ ಜತೆ ಗಸ್ತು ತಿರುಗುವ ವೇಳೆ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಶಿಂದೋಗಿ ಗ್ರಾಮದ ಮಂಜುನಾಥ ಬಸಪ್ಪ ಭಜಂತ್ರಿ ಹಾಗೂ ಉಮೇಶ ಪಾಂಡುರಂಗ ಭಜಂತ್ರಿ ಬಂಧಿತರು.

’ನ್ಯಾಯಾಲಯದ ಅನುಮತಿ ಪಡೆದು ಕಾಡುಹಂದಿಯನ್ನು ಸುರಕ್ಷಿತವಾಗಿ ನೈಸರ್ಗಿಕ ಆರಣ್ಯ ಪ್ರದೇಶಕ್ಕೆ ಬಿಡಲಾಗಿದೆ’ ಎಂದು ಸವದತ್ತಿ ವಲಯ ಅರಣ್ಯಾಧಿಕಾರಿ ಸಂಜೀವ ಸಂಶುದ್ಧಿ ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದರು.

ADVERTISEMENT

ಸೊಗಲ ಶಾಖೆಯ ಉಪವಲಯ ಅರಣ್ಯಾಧಿಕಾರಿ ಎಚ್.ಬಿ. ಪನ್ನಾಳಗಡ, ಗಸ್ತ ವನಪಾಲಕ ಕೃಷ್ಣಾ ಮುನವಳ್ಳಿ, ಮುನವಳ್ಳಿ ಉಪವಲಯ ಅರಣ್ಯಾಧಿಕಾರಿ ವ್ಹಿ.ಎಲ್. ಓಗಿ, ಗಸ್ತು ವನಪಾಲಕ ರಮೇಶ ಪಾಟೊಳ್ಳಿ ಕಾರ್ಯಾಚರಣೆಯಲ್ಲಿ ಜತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.