ADVERTISEMENT

ಚನ್ನಮ್ಮನ ಕಿತ್ತೂರು| ಅಪಘಾತ: ಮಹಿಳೆ ಸ್ಥಳದಲ್ಲೇ ಸಾವು

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 2:43 IST
Last Updated 21 ಜುಲೈ 2025, 2:43 IST
ಬಚ್ಚನಕೇರಿ ಬಳಿ ಚಿಕ್ಕ ಸೇತುವೆ ಸಮೀಪದ ಚರಂಡಿಗೆ ಉರುಳಿ ಬಿದ್ದಿರುವ ಕಾರು
ಬಚ್ಚನಕೇರಿ ಬಳಿ ಚಿಕ್ಕ ಸೇತುವೆ ಸಮೀಪದ ಚರಂಡಿಗೆ ಉರುಳಿ ಬಿದ್ದಿರುವ ಕಾರು   

ಚನ್ನಮ್ಮನ ಕಿತ್ತೂರು: ರಾಷ್ಟ್ರೀಯ ಹೆದ್ದಾರಿ ಮೇಲಿರುವ ತಾಲ್ಲೂಕಿನ ಬಚ್ಚನಕೇರಿ ಬಳಿ, ಚಿಕ್ಕ ಸೇತುವೆ ಸಮೀಪದ ಚರಂಡಿಗೆ ಭಾನುವಾರ ಕಾರು ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿಯ ಶ್ರೀದೇವಿ ಟೆಂಗಿನಕಾಯಿ (38) ಮೃತರು. ಅವರ ಪತಿ, ಚಾಲಕ ಈಶ್ವರ ಟೆಂಗಿನಕಾಯಿ (45) ಅವರಿಗೆ ಗಾಯಗಳಾಗಿವೆ.

ಶ್ರೀದೇವಿ ಅವರು ಬೆಳಗಾವಿ ಜಿಲ್ಲೆಯ ಸಂಕೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಫಾರ್ಮಾಸಿಸ್ಟ್ ಆಗಿದ್ದರು. ಕಲಘಟಗಿಗೆ ವರ್ಗವಾದ ಹಿನ್ನೆಲೆಯಲ್ಲಿ ದಂಪತಿ ಅಲ್ಲಿಗೆ ತೆರಳುತ್ತಿದ್ದಾಗ, ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಎಸ್ಐ ಪ್ರವೀಣ ಗಂಗೋಳ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಚನ್ನಮ್ಮನ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.