ಮೂಡಲಗಿ: ತಾಲ್ಲೂಕಿನ ಯಾದವಾಡದ ಚೌಕೇಶ್ವರ ಮತ್ತು ಘಟ್ಟಗಿ ಬಸವೇಶ್ವರ ಜಾತ್ರೆಯ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಜರುಗಿದ ಜಂಗಿ ಕುಸ್ತಿಗಳು ಕುಸ್ತಿ ಪ್ರೇಮಿಗಳ ಮನ ತಣಿಸಿದವು.
ಮಹಾರಾಷ್ಟ್ರ ಮತ್ತು ಕರ್ನಾಟದ ಬೇರೆ ಬೇರೆ ಜಿಲ್ಲೆಗಳಿಂದ 30ಕ್ಕೂ ಅಧಿಕ ಪೈಲ್ವಾನರು ಭಾಗವಹಿಸಿದ್ದರಿಂದ ಕುಸ್ತಿ ಅಖಾಡವು ಪೈಲ್ವಾನರಿಂದ ತುಂಬಿಕೊಂಡಿತ್ತು. ಸಮಬಲವಾದ ಪೈಲ್ವಾನರ 15 ತಂಡಗಳಲ್ಲಿ ರೋಚಕವಾಗಿ ಕುಸ್ತಿಗಳು ಜರುಗಿದವು. ಕುಸ್ತಿ ಪಟುಗಳು ಮೈದಾನಕ್ಕೆ ಬರುತ್ತಿದ್ದಂತೆ ಸೇರಿದ ಜನರು ಕೇಕೇ, ಸಿಳ್ಳೆ ಹಾಕಿ ಅವರನ್ನು ಹುರುದುಂಬಿಸುತ್ತಿದ್ದರು.
ಶಿರೋಳದ ಕಿರಿಯರ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಆಡಿರುವ ಪೈಲ್ವಾನ ಶಿವಾನಂದ ಹಂಚಿನಾಳ ಮತ್ತು ಮುಧೋಳದ ಪೈಲ್ವಾನ ವರುಣ ಕುಮಟೊಳ್ಳಿ ಇವರ ಮಧ್ಯದಲ್ಲಿ ಜರುಗಿದ ಕುಸ್ತಿ ವರಸೆಯು ರೋಮಾಂಚನವಾಗಿತ್ತು. ವಿಜೇತರಿಗೆ ಮತ್ತು ಪರಾಭವಗೊಂಡ ಕುಸ್ತಿ ಪಟುಗಳಿಗೆ ಜಾತ್ರಾ ಸಮಿತಿಯವರು ನಗದು ಬಹುಮಾನ ನೀಡಿ ಗೌರವಿಸಿದರು.
ಜಾತ್ರಾ ಸಮಿತಿ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡರ ಪೈಲ್ವಾನರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿ ’ಕುಸ್ತಿಯಂತ ದೇಸಿ ಕ್ರೀಡೆಳು ಉಳಿಸಿ ಬೆಳೆಸುವುದು ಇಂದಿನ ಅವಶ್ಯವಿದೆ. ಸದೃಢ ದೇಹದಾರ್ಢ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಕುಸ್ತಿ ಅವಶ್ಯವಿದೆ’ ಎಂದರು.
ಕುಸ್ತಿ ತರಬೇತುದಾರ ಪೈಲ್ವಾನ್ ಶಂಕರ ಗಾಣಗೇರ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಲಿಂಗಬಸಯ್ಯ ಹಿರೇಮಠ, ಜಾತ್ರಾ ಸಮಿತಿ ಸದಸ್ಯರಾದ ರಮೇಶ ಸಾವಳಗಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಲ್ಮೇಶ ಗಾಣಿಗೇರ, ಹಣಮಂತ ಚಿಕ್ಕೇಗೌಡರ, ಗುರುನಾಥ ರಾಮದುರ್ಗ, ಹನಮಂತ ಹ್ಯಾಗಾಡಿ, ಗೊಲಪ್ಪ ಕಾಗವಾಡ, ವೆಂಕಟಕೇರಿ ಮಲ್ಲಪ್ಪ ರಾಮದುರ್ಗ, ಹನಮಂತ ಬಿಲಕುಂದಿ, ವೆಂಕಟ ಕೇರಿ, ವಿಠ್ಠಲ ಕಂಕಣವಾಡಿ, ಮಲ್ಲಪ್ಪ ರಾಮದುರ್ಗ, ಎಂ.ಎಂ.ಶೆಟ್ಟರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.