ADVERTISEMENT

ಯೋಗಿಕೊಳ್ಳ ಸಂಪರ್ಕ ರಸ್ತೆ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 13:01 IST
Last Updated 4 ಆಗಸ್ಟ್ 2019, 13:01 IST
ಗೋಕಾಕ ಹೊರವಲಯದ ಪುಣ್ಯಕ್ಷೇತ್ರ ಯೋಗಿಕೊಳ್ಳ ರಸ್ತೆಯ ಘಟ್ಟಿಬಸವಣ್ಣ ತಿರುವಿನಲ್ಲಿ ಮಾರ್ಕಂಡೇಯ ನದಿಗೆ ಮಹಾಪೂರ ಬಂದು ಭಾನುವಾರ ಸಂಪರ್ಕ ಕಡಿತಗೊಂಡಿದೆ
ಗೋಕಾಕ ಹೊರವಲಯದ ಪುಣ್ಯಕ್ಷೇತ್ರ ಯೋಗಿಕೊಳ್ಳ ರಸ್ತೆಯ ಘಟ್ಟಿಬಸವಣ್ಣ ತಿರುವಿನಲ್ಲಿ ಮಾರ್ಕಂಡೇಯ ನದಿಗೆ ಮಹಾಪೂರ ಬಂದು ಭಾನುವಾರ ಸಂಪರ್ಕ ಕಡಿತಗೊಂಡಿದೆ   

ಗೋಕಾಕ: ಶ್ರಾವಣ ಮಾಸದಲ್ಲಿ ಬರುವ ನಾಲ್ಕು ಸೋಮವಾರ ದಿನಗಳಂದು ಭಕ್ತರು ಪುಣ್ಯಕ್ಷೇತ್ರ ಯೋಗಿಕೊಳ್ಳದ ಬೆಟ್ಟದ ಮೇಲಿರುವ ಮಲ್ಲಿಕಾರ್ಜುನ (ಮಲ್ಲಯ್ಯ) ಸ್ವಾಮಿ ದರ್ಶನ ಪಡೆಯುತ್ತಾರೆ. ಆದರೆ, ಭಾನುವಾರ ಮಾರ್ಕಂಡೇಯ ನದಿಯ ಹಿನ್ನೀರಿನಲ್ಲಿ ಸುರಿದ ಮಳೆಯಿಂದಾಗಿ ನದಿಗೆ ಮಹಾಪೂರ ಬಂದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಸೋಮವಾರ ಮುಂಜಾನೆಯೂ ಪ್ರವಾಹ ಸ್ಥಿತಿ ಮುಂದುವರಿದರೆ ಮಲ್ಲಿಕಾರ್ಜುನ ದರ್ಶನಕ್ಕೆ ತೆರಳಲು ಭಕ್ತರು ಕಡಿದಾದ ಗುಡ್ಡದ ಮೂಲಕ ನಡೆದುಕೊಂಡು ಹೋಗಬೇಕಾಗುತ್ತದೆ ಅಥವಾ ದೂರದ ಕಡಬಗಟ್ಟಿ ಬೆಟ್ಟ ಬಳಸಿ ದಾಟಿ ಅಲ್ಲಿಂದ ಇಳಿಜಾರಿನ ಕಡಿದಾದ ರಸ್ತೆ ಮೂಲಕ ಗುಡ್ಡವನ್ನು ಇಳಿದು ದೇವರ ದರ್ಶನ ಪಡೆಯಬೇಕಾಗುತ್ತದೆ.

‘ಭಕ್ತರಿಗೆ ಮಲ್ಲಿಕಾರ್ಜುನ ಸ್ವಾಮಿ ಅನುಕೂಲ ಕಲ್ಪಿಸಲಿದ್ದಾನೆ. ಸೋಮವಾರದ ವೇಳೆಗೆ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ’ ಎನ್ನುತ್ತಾರೆ ದೇವಾಲಯದ ಅರ್ಚಕ ಚನಮಲ್ಲಯ್ಯಸ್ವಾಮಿ ಗೂಗಿಕೊಳ್ಳಮಠ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.