
ಪ್ರಜಾವಾಣಿ ವಾರ್ತೆಬೆಂಗಳೂರು: ಜಾತಿ ಗಣತಿ ಜತೆಯಲ್ಲೇ ಅಂಗವಿಕಲರ ಗಣತಿ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿ ತಿಯು ಮುಖ್ಯಮಂತ್ರಿಯನ್ನು ಒತ್ತಾಯಿಸಿದೆ.
ಜಾತಿ ಗಣತಿ ಸಮೀಕ್ಷೆ ಕೈಗೊಂಡಿರುವುದು ಮಹತ್ವದ ಹೆಜ್ಜೆಯಾಗಿದೆ. ಜಾತಿ ಗಣತಿಯಲ್ಲೇ ಪ್ರತ್ಯೇಕ ಕಾಲಂ ನೀಡಿ ಎಲ್ಲ ರೀತಿಯ ಅಂಗವಿಕಲರ ಸಮೀಕ್ಷೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ಕೋರಿದ್ದಾರೆ.
ಶಾಸಕರು, ಸಂಸದರ ಅನುದಾನ ಸೇರಿದಂತೆ ಎಲ್ಲ ಇಲಾಖೆಗಳಲ್ಲಿನ ಅಂಗ ವಿಕಲರ ಅನುದಾನ ವಾರ್ಷಿಕ ಸುಮಾರು ₨ 250 ಕೋಟಿ ಲಭ್ಯವಾಗುತ್ತದೆ. ಆದರೆ, ಈ ಅನುದಾನದಲ್ಲಿ ಶೇಕಡ 25ರಷ್ಟು ಸಹ ಖರ್ಚಾಗುತ್ತಿಲ್ಲ. ಈ ಅನುದಾನಸದ್ಭಳಕೆಯಾಗಲು ಅಂಗವಿಕಲರ ಬಗ್ಗೆ ನಿಖರವಾದ ಅಂಕಿ–ಅಂಶ ಮತ್ತು ಸ್ಥಿತಿಗತಿ ಅಧ್ಯಯನ ಮಾಡಿದರೆ ಮಾತ್ರ ಸಾಧ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.