ADVERTISEMENT

ಅಂಗವಿಕಲ ಶಾಲಾ ನೂತನ ಕೊಠಡಿಗೆ ಗುದ್ದಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:20 IST
Last Updated 5 ಮಾರ್ಚ್ 2012, 19:20 IST

ಯಲಹಂಕ: `ಅಮ್ಮ ಫೌಂಡೇಶನ್ ಹೆಲ್ಪ್ ಅಂಡ್ ಗ್ರೋ~ ಮತ್ತು `ಗೋ ಗ್ರೀನ್ ಸ್ಟೂಡೆಂಟ್ ವಾಯ್ಸ~ ಸಂಸ್ಥೆಯ ವತಿಯಿಂದ ಕೈಗೆತ್ತಿಕೊಂಡಿರುವ ಇಲ್ಲಿನ ಉಪನಗರದ `ಬೆಳಕು~ ಅಂಗವಿಕಲ ಮಕ್ಕಳ ಶಾಲೆಯ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ನಾಗಾರ್ಜುನ ಕಾಲೇಜಿನ ಡೀನ್ ಶೋಭಾಭಟ್ ಗುದ್ದಲಿಪೂಜೆ ನೆರವೇರಿಸಿದರು.
 
ಪರಿಸರವಾದಿ ಗೋಪಿ ಮಾಧವ್ ವಿವಿಧ ವಾದ್ಯ ನುಡಿಸುವ ಮೂಲಕ ಮಕ್ಕಳನ್ನು ರಂಜಿಸಿದರು. ಕಾವೇರಿ, ನಾಗಾರ್ಜುನ ಮತ್ತು ಜ್ಞಾನ ಜ್ಯೋತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಾದ ಶುಭಾಂಜಲಿ, ಕೆ.ಸಿ.ಹರೀಶ್ ಮೊದಲಾದವರು ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.