ಬೆಂಗಳೂರು: `ಇಂಪ್ಲಾಂಟ್ ಸ್ಟಡಿ ಗ್ರೂಪ್ ಸಂಸ್ಥೆಯು ಅಂತರರಾಷ್ಟ್ರೀಯ ದಂತ ಕಸಿ ತಂತ್ರಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಪ್ರಥಮ ದಕ್ಷಿಣ ಏಷ್ಯಾ ದಂತ ಕಸಿ ಸಮಾವೇಶವನ್ನು ಇದೇ 14 ಮತ್ತು 15 ರಂದು ಗ್ರ್ಯಾಂಡ್ ಮಗರತ್ ಹೋಟೆಲ್‌ನಲ್ಲಿ ಏರ್ಪಡಿಸಿದೆ~ ಎಂದು ಗ್ರೂಪ್‌ನ ಅಧ್ಯಕ್ಷ ಡಾ.ಗಿರೀಶ್‌ರಾವ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ದಂತಕಸಿ ಚಿಕಿತ್ಸಾ ವಿಧಾನವು ಪಾಶ್ಚಿಮಾತ್ಯ ದೇಶಗಳಲ್ಲಿ ಸುಮಾರು 50 ವರ್ಷಗಳಿಂದ ಪ್ರಚಲಿತದಲ್ಲಿದೆ. ಆದರೆ, ಭಾರತದಲ್ಲಿ 10 ವರ್ಷಗಳಿಂದ ಈಚೆಗೆ ಕಾಲಿಡುತ್ತಿದೆ.
ವಿವಿಧ ದಂತ ಚಿಕಿತ್ಸಾ ವಿಧಾನಗಳಿಂದ ಹಲವಾರು ರೀತಿಯ ದಂತ ಹಾನಿಗಳಿಗೆ ಸ್ವಾಭಾವಿಕ ಹಲ್ಲುಗಳಂತೆಯೇ ಉಪಯೋಗಿಸಬಹುದಾದ ರೀತಿಯಲ್ಲಿಯೇ ದಂತ ಚಿಕಿತ್ಸಾ ವಿಧಾನದಿಂದ ಸರಿಪಡಿಸಬಹುದಾಗಿದೆ~ ಎಂದು ವಿವರಿಸಿದರು.
`ಈ ಸಮಾವೇಶದಲ್ಲಿ ಬೇರೆ ಬೇರೆ ದೇಶಗಳಿಂದ ದಂತ ವೈದ್ಯರು ಭಾಗವಹಿಸಲಿದ್ದಾರೆ. ವಿವಿಧ ದಂತ ಕಸಿ ವಿಧಾನಗಳಲ್ಲಿ ಪರಿಣತಿ ಕಲ್ಪಿಸುವ ಸಲುವಾಗಿ ಕಾರ್ಯಾಗಾರ ಏರ್ಪಡಿಸಲಾಗಿದೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.