ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಅಬಕಾರಿ ಇಲಾಖೆ ನಿಯಂತ್ರಣಾ ಕೊಠಡಿ ತೆರೆದಿದೆ.
ಅಶೋಕನಗರ, ಬಾಣಸವಾಡಿ, ಫ್ರೇಜರ್ಟೌನ್, ಹಲಸೂರು, ಇಂದಿರಾನಗರ, ಜೀವನಬಿಮಾನಗರ, ಕೆ.ಆರ್. ಪುರ, ಮಹದೇವಪುರ, ಮುನಿರೆಡ್ಡಿಪಾಳ್ಯ, ರಾಜಮಹಲ್ ವಿಲಾಸ್, ಶಿವಾಜಿನಗರ ಮತ್ತು ವೈಟ್‌ಫೀಲ್ಡ್ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ತಯಾರಿ, ಸಾಗಣೆ, ಮಾರಾಟ, ದಾಸ್ತಾನು ಕಂಡು ಬಂದರೆ -2527 0034/ 94495 97229 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ದೂರು ನೀಡಬಹುದು.
ನಿಯಂತ್ರಣ ಕೊಠಡಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ನಗರ ಪೂರ್ವ ವಿಭಾಗದ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.