ADVERTISEMENT

ಅಡಿಕೆ: ನೈಜ ವರದಿ ಸಲ್ಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ಬೆಂಗಳೂರು: ‘ಅಡಿಕೆಯ ಕುರಿತು ನೈಜವಾದ ಸಂಶೋಧನಾ ವರದಿ­ಗಳನ್ನು ಸುಪ್ರೀಂ ಕೋರ್ಟ್‌ ಮುಂದೆ ಸಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳ­ಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಆರೋಗ್ಯ ಸಚಿವಾಲಯವು  ಮೊದಲು ಅಡಿಕೆ ಮಿಶ್ರಿತ ತಂಬಾಕು ತಿಂದರೆ ಕ್ಯಾನ್ಸರ್‌ ಬರು­ತ್ತದೆಯೆಂದು ಹೇಳಿದ್ದು, ಈಗ ಬರೀ ಅಡಿಕೆ ಸೇವನೆಯಿಂದಲೂ ಕ್ಯಾನ್ಸರ್‌ಗೆ ತುತ್ತಾ­ಗಬೇಕಾಗುತ್ತದೆ ಎಂದು ಹೇಳಿಕೆ ನೀಡಿದೆ. ಈ ಹೇಳಿಕೆಯು ಅವೈಜ್ಞಾನಿಕವಾಗಿದೆ’ ಎಂದರು.

‘ಜವಾಹರ್‌ಲಾಲ್‌ ವಿಶ್ವವಿದ್ಯಾ­ಲಯದ ಕ್ಯಾನ್ಸರ್‌ ಬಯಾಲಜಿ ಸಂಶೋ­ಧನಾ ಕೇಂದ್ರವು   ಅಡಿಕೆಯ ಬಗೆಗೆ ಸಂಶೋಧನೆ ಕೈಗೊಂಡು ಅಡಿಕೆ ತಿನ್ನುವುದರಿಂದ ಕ್ಯಾನ್ಸರ್‌ ಬರುವುದಿಲ್ಲ ವೆಂದು ದಾಖಲೆಗಳನ್ನು ನೀಡಿದೆ’ ಎಂದರು.

‘ಸಂಶೋಧನಾ ಕೇಂದ್ರದ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ ಮುಂದೆ ಸಲ್ಲಿಸಬೇಕು. ಅಡಿಕೆಯ ಬಗೆಗಿರುವ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಬೇಕು. ಜನತೆಗೆ ತಪ್ಪು ಮಾಹಿತಿ ರವಾನಿಸುವುದನ್ನು ತಪ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.