ಬೆಂಗಳೂರು: ನಗರದಲ್ಲಿ ಹಾಕಲಾದ ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ)ಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಒಂಬತ್ತು ದೂರಸಂಪರ್ಕ ಸಂಸ್ಥೆಗಳು ಸೋಮವಾರ ಬಿಬಿಎಂಪಿಗೆ ಒಪ್ಪಿಗೆ ಪತ್ರ ನೀಡಿವೆ.
 
 ಏರ್‌ಟೆಲ್, ಏರ್‌ಸೆಲ್, ಸ್ಪೈಸ್, ಐಡಿಯಾ, ವೊಡಾಫೋನ್, ರಿಲ ಯನ್ಸ್ ಆರ್‌ಜಿಐಎಲ್, ರಿಲ ಯನ್ಸ್ ಜಿಯೊ ಇನ್ಫೋಕಾಂ ಲಿಮಿಟೆಡ್, ಟಾಟಾ ಟೆಲಿ ಸರ್ವೀಸ್, ಟಾಟಾ ಕಮ್ಯುನಿಕೇಷನ್ಸ್ ಮತ್ತು ಸ್ಟೆರ್‌ಲೈಟ್ ಸಂಸ್ಥೆಗಳ ಮುಖ್ಯಕಾರ್ಯ ನಿರ್ವಹ ಣಾಧಿಕಾರಿಗಳು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದರು.
 
 ಈ ಒಂಬತ್ತು ಸಂಸ್ಥೆಗಳಲ್ಲದೆ ಇನ್ನೂ ನಾಲ್ಕು ಕಂಪೆನಿಗಳಿಂದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಗಿಂತ ಕಡಿಮೆ ಶ್ರೇಣಿಯ ಅಧಿಕಾರಿಗಳು  ಪಾಲ್ಗೊಂಡಿದ್ದರು.
 
 ಅವರೂ ಒಪ್ಪಿಗೆ ಪತ್ರ ನೀಡಲು ಸಿದ್ಧವಿದ್ದರೂ ಮೇಲಧಿಕಾರಿ ಗಳಿಂದಲೇ ಪತ್ರ ತರಬೇಕು ಎಂದು ಅವರಿಗೆ ಸೂಚಿಸಲಾಯಿತು.
 ಬಿಬಿಎಂಪಿ ಒಎಫ್‌ಸಿ ಪರಿಶೀಲನಾ ಸಮಿತಿ ಅಧ್ಯಕ್ಷರೂ ಆಗಿದ್ದ ಪಾಲಿಕೆ ಸದಸ್ಯ ಎನ್.ಆರ್. ರಮೇಶ್, ‘ಈಗಾಗಲೇ ಒಂಬತ್ತು ಸಂಸ್ಥೆಗಳು ಒಪ್ಪಿಗೆ ಪತ್ರ ನೀಡಿವೆ. ಮಿಕ್ಕ ಸಂಸ್ಥೆಗಳೂ ಒಪ್ಪಿಗೆ ಪತ್ರ ನೀಡಲು ಮುಂದೆ ಬಂದಿವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.