
ಪ್ರಜಾವಾಣಿ ವಾರ್ತೆಬೆಂಗಳೂರು: ಅನಧಿಕೃತವಾಗಿ ಹುಕ್ಕಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿರುವ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು, ಹುಕ್ಕಾ ಕೊಳವೆಗಳನ್ನು ಹಾಗೂ ತಂಬಾಕು ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನ ಮೂಲದ ನರೇಶ್ ಸಿಂಗ್(22) ಹಾಗೂ ಧೀರು ಸಿಂಗ್(20) ಬಂಧಿತರು. ಇಬ್ಬರು ಸಹೋದರರಾಗಿದ್ದು ಕುಮಾರಸ್ವಾಮಿ ಲೇಔಟ್‌ನ 50 ಅಡಿ ರಸ್ತೆಯಲ್ಲಿ ತಂಪು ಪಾನಿಯದ ಅಂಗಡಿ ಇಟ್ಟುಕೊಂಡಿದ್ದರು.ಅಲ್ಲಿಯೇ ಸಣ್ಣ ಕೋಣೆಯೊಂದರಲ್ಲಿ ಅನಧಿಕೃತವಾಗಿ ಹುಕ್ಕಾ ಮಾರಾಟ ಮಾಡುತ್ತಿದ್ದಾರೆ ಎಂದು ಎನ್‌ಎಸ್‌ಯುಐ ಸಂಘಟನೆಯ ಸದಸ್ಯ ಮಹೇಶ್ ದೂರು ನೀಡಿದ್ದರು.
ದೂರಿನನ್ವಯ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು. ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.