ADVERTISEMENT

ಅಮೆರಿಕ ಜಲ ತಂತ್ರಜ್ಞಾನ ವಾಣಿಜ್ಯ ನಿಯೋಗ ನಗರಕ್ಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 19:50 IST
Last Updated 24 ಫೆಬ್ರುವರಿ 2011, 19:50 IST

ಬೆಂಗಳೂರು: ಅಮೆರಿಕದ ಜಲ ತಂತ್ರಜ್ಞಾನ ವಾಣಿಜ್ಯ ನಿಯೋಗವು ಫೆಬ್ರುವರಿ 28 ಹಾಗೂ ಮಾರ್ಚ್ 1ರಂದು ನಗರಕ್ಕೆ ಭೇಟಿ ನೀಡಲಿದೆ ಎಂದು ಚೆನ್ನೈನಲ್ಲಿರುವ ಅಮೆರಿಕದ ಕಾನ್ಸುಲೇಟ್ ಜನರಲ್ ಕಚೇರಿ ತಿಳಿಸಿದೆ.

ಅಮೆರಿಕದ ವಾಣಿಜ್ಯ ಇಲಾಖೆ ಆಯೋಜಿಸಿರುವ ಈ ಭೇಟಿಯಲ್ಲಿ ನೀರು ಹಾಗೂ ನಿರುಪಯುಕ್ತ ನೀರಿನ ಸಂಸ್ಕರಣೆ ಹಾಗೂ ಶುದ್ಧೀಕರಣ ಸಾಮರ್ಥ್ಯವನ್ನು ಹೆಚ್ಚಿಸುವ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸುವರು. ವಿಶೇಷವಾದ ಪಂಪುಗಳು, ನೀರಿನ ಗುಣಮಟ್ಟ ಪರೀಕ್ಷಿಸುವ ಉಪಕರಣಗಳು, ನಿರುಪಯುಕ್ತ ನೀರನ್ನು ಸಂಸ್ಕರಿಸುವ ತಂತ್ರಜ್ಞಾನ ಸೇವೆಗಳ ಪ್ರಾತಿನಿಧ್ಯವನ್ನು ಈ ನಿಯೋಗ ಹೊಂದಿರುತ್ತದೆ.

ಏರೋಜೆಟ್, ಅಂಡಲೈಜ್, ಎ.ಡಬ್ಲ್ಯೂ.ಎಸ್, ಬಯೋ ಮೈಕ್ರೋಬಿಕ್ಸ್, ಕಾಲ್ಗನ್ ಕಾರ್ಬನ್, ಸಿ.ಎಂ.ಎಫ್ ಡಿಸ್ಟ್ರಿಬ್ಯೂಷನ್, ಎನ್ವಿರಾನ್‌ಮೆಂಟಲ್ ಪ್ರಾಡಕ್ಟ್ಸ್ ಆಫ್ ಮಿನ್ನೆಸೋಟಾ ಗ್ಲೋಬಲ್, ವಾಟರ್ ಗ್ರೂಪ್, ಹ್ಯಾಚ್, ಹೆಡ್ ವರ್ಕ್ಸ್, ಲೋಬ್ ಪ್ರೋ, ನೋಬಲ್ ಸಿಸ್ಟಮ್ಸ್, ಪಾರ್ಕ್‌ಸನ್, ಸ್ಮಿತ್ ಅಂಡ್ ಲವ್‌ಲೆಸ್ ಕಂಪೆನಿಗಳಲ್ಲದೇ ಮಿನ್ನೆಸೋಟಾ  ವಾಣಿಜ್ಯ ಕಚೇರಿ ಹಾಗೂ ಕ್ಯಾಲಿಫೋರ್ನಿಯಾದ ಸ್ಯಾನ್‌ಡಿಯಾಗೊ ವರ್ಲ್ಡ್ ಟ್ರೇಡ್ ಸೆಂಟರ್‌ನ ಪ್ರತಿನಿಧಿಗಳು ನಿಯೋಗದಲ್ಲಿ ಇರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.