ADVERTISEMENT

ಆನ್‌ಲೈನ್‌ಲ್ಲಿ ಮಾರಾಟದಿಂದ ನಾಯಿಮರಿ ಸಾವು; ಅಭಿಯಾನ

​ಪ್ರಜಾವಾಣಿ ವಾರ್ತೆ
Published 18 ಮೇ 2018, 19:25 IST
Last Updated 18 ಮೇ 2018, 19:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆನ್‌ಲೈನ್‌ಲ್ಲಿ ಮಾರಾಟವಾದ ಮೂರು ವಾರಗಳ ಮುದ್ದಿನ ನಾಯಿಮರಿ ಸಾವು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.

ಇತ್ತೀಚೆಗೆ ಬಘೀರಾ ಎಂಬ ಗಂಡು ನಾಯಿಮರಿಯನ್ನು ಈ ಕಾಮರ್ಸ್‌ ಜಾಲತಾಣದ ಮೂಲಕ ಮಾರಾಟ ಮಾಡಲಾಗಿತ್ತು. ಈ ಮರಿ ಮಾರಾಟ ಮಾಡಿದ ಒಂದೇ ದಿನಕ್ಕೆ ಸಾವನ್ನಪ್ಪಿತ್ತು.

ಈ ಕುರಿತಂತೆ ನಗರದ ಸಿ.ಜೆ.ಸ್ಮಾರಕ ಟ್ರಸ್ಟ್‌, #NomoreBagheeras and #banonlinepetsales ಆನ್‌ಲೈನ್‌ನಲ್ಲಿ ಜಾಗೃತಿ ಅಭಿಯಾನ ಆರಂಭಿಸಿದೆ. ಈ ದೂರಿಗೆ 17 ಸಾವಿರ ಜನರು ಸಹಿ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಾಯಿಮರಿಗಳ ಮಾರಾಟ ಒಂದು ರೀತಿ ಸರಕಾಗಿ ಪರಿಣಮಿಸಿದೆ. ಇದರ ವಿರುದ್ಧ ಪ್ರಾಣಿಪ್ರಿಯರು ಎಚ್ಚೆತ್ತುಕೊಳ್ಳಬೇಕು’ ಎಂಬುದು ಅಭಿಯಾನದ ಸಂದೇಶ.

‘ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಶ್ವಾನ ಸಂತಾನವೃದ್ಧಿ ಹಾಗೂ ಮಾರುಕಟ್ಟೆ ನಿಯಮ–2017ರ ಪ್ರಕಾರ ಈ ರೀತಿ ಶ್ವಾನ ಮಾರಾಟ ಮಾಡುವುದು ಕಾನೂನು ಬಾಹಿರ’ ಎಂಬುದು ಪ್ರಾಣಿಪ್ರಿಯರ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.