ADVERTISEMENT

ಆರೋಗ್ಯ:ಮುನ್ನೆಚ್ಚರಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:45 IST
Last Updated 12 ಫೆಬ್ರುವರಿ 2012, 19:45 IST

ನೆಲಮಂಗಲ: `ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಆರೋಗ್ಯದ ಕಡೆಗೆ ಗಮನ ನೀಡಿದರೆ ನೆಮ್ಮದಿಯ ಜೀವನ ನಡೆಸಬಹುದಾಗಿದೆ~ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಈ.ಟಿ.ಕೇರ್ ರಾಜು ತಿಳಿಸಿದರು.

ಸ್ಥಳೀಯ ರೋಟರಿ ಸಂಸ್ಥೆಯು ಗೊಲ್ಲಹಳ್ಳಿಯ ಬೈಲಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

`ಬೆಂಗಳೂರಿನ ಸಾಗರ್ ಆಸ್ಪತ್ರೆಯ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಐದು ಮಂದಿ ಹಾಗೂ ಕಣ್ಣಿನ ಪೊರೆ ಸಮಸ್ಯೆಯಿರುವ 25 ಮಂದಿಗೆ ಸಂಸ್ಥೆ ವತಿಯಿಂದ ಉಚಿತ ಚಿಕಿತ್ಸೆ ನೀಡಲಾಗುವುದು~ ಎಂದರು.

ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 50 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ರೆಡ್‌ಕ್ರಾಸ್ ಸಂಸ್ಥೆಯ ವೈದ್ಯ ಡಾ.ಹಿರೇಮಠ್, ರೋಟರಿ ಸಂಸ್ಥೆಯ ನಿರ್ದೇಶಕ ಪೃಥ್ವಿರಾಜ್, ಖಜಾಂಚಿ ಎಂ.ಎನ್.ಹರೀಶ್‌ಕುಮಾರ್, ಕಾರ್ಯದರ್ಶಿ ಎಸ್.ಮುನಿ ರಾಜಯ್ಯ, ಬೆಂಗಳೂರು ಉತ್ತರ ಸಂಸ್ಥೆಯ ಕೆ.ವಿ.ರತ್ನಾಧರ, ರೋಟರಿ ಸಂಸ್ಥೆಯ ಶಿವಕುಮಾರ್, ವನಕಲ್ಲು ಮಠದ ಬಸವಕಿರಣ ಸ್ವಾಮೀಜಿ, ಗ್ರಾ.ಪಂ.ಅಧ್ಯಕ್ಷ ವಿ.ರಾಮಸ್ವಾಮಿ, ವಸಂತಲಕ್ಷ್ಮೀ ರಂಗನಾಥ್, ಸದಸ್ಯರಾದ ಹರ್ಷ, ಹನುಮೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.