ADVERTISEMENT

ಇಂದಿನಿಂದ ದ್ರಾಕ್ಷಿ ಮೇಳ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 19:45 IST
Last Updated 8 ಫೆಬ್ರುವರಿ 2011, 19:45 IST

ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘವು (ಹಾಪ್‌ಕಾಮ್ಸ್) ನಗರದಲ್ಲಿ ಫೆ. 9ರಿಂದ ಐದನೇ ವರ್ಷದ ದ್ರಾಕ್ಷಿಮೇಳವನ್ನು ಆಯೋಜಿಸಿದೆ. ಮೇಳದಲ್ಲಿ ಬಾಗಲಕೋಟೆ, ಬಿಜಾಪುರ ಹಾಗೂ ಬೆಂಗಳೂರಿನ ಸುತ್ತಮುತ್ತ ಬೆಳೆದಿರುವ ದ್ರಾಕ್ಷಿ ಬೆಳೆಯನ್ನು ಮಾರಾಟಕ್ಕೆ ಇಡಲಾಗುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹಾಪ್‌ಕಾಮ್ಸ್ ಅಧ್ಯಕ್ಷ ಬಿ.ವಿ.ಚಿಕ್ಕಣ್ಣ ‘ಬೆಂಗಳೂರು ನಗರದಲ್ಲಿರುವ ಸಂಸ್ಥೆಯ ಎಲ್ಲಾ ಮಾರಾಟ ಮಳಿಗೆಗಳು, ಪ್ರಮುಖ ಸರ್ಕಾರಿ/ಅರೆ ಸರ್ಕಾರಿ, ಖಾಸಗಿ ಸಂಘ ಸಂಸ್ಥೆಗಳ ಆವರಣ ಮತ್ತು ಇತರೆ ಅನುಬಂಧದಲ್ಲಿನ ಆಯ್ದ ಸ್ಥಳಗಳಲ್ಲಿ ದ್ರಾಕ್ಷಿ ಮಾರಾಟ ಮಾಡಲಾಗುವುದು’ ಎಂದು ತಿಳಿಸಿದರು.

‘ಥಾಮ್ಸನ್ ಸೀಡ್‌ಲೆಸ್, ಸೊನಾಕಾ, ಶರದ್, ಕೃಷ್ಣ ಶರದ್, ತಾಜ್ ಎ ಗಣೇಶ್, ಇಂಡಿಯನ್ ಬ್ಲಾಕ್ ಗ್ಲೋಬ್, ರೆಡ್‌ಗ್ಲೋಬ್, ಫ್ಲೇಮ್ ಸೀಡ್‌ಲೆಸ್, ಮಾಣಿಕ್ ಚಮನ್, ಬೆಂಗಳೂರು ನೀಲಿ, ದಿಲ್‌ಕುಶ್ ಇತ್ಯಾದಿ ವೈವಿಧ್ಯಮಯ ದ್ರಾಕ್ಷಿ ತಳಿಗಳನ್ನು ಮಾರಾಟ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಉತ್ತರ ಕರ್ನಾಟಕದಲ್ಲಿ ಈ ಬಾರಿ ದ್ರಾಕ್ಷಿ ಬೆಳೆ ಕಡಿಮೆ ಇದ್ದು ಬೆಂಗಳೂರು ಭಾಗದಲ್ಲಿ ಉತ್ತಮ ಫಸಲು ದೊರೆತಿದೆ. ಏಪ್ರಿಲ್ ಕೊನೆಯವರೆಗೆ ಮೇಳ ನಡೆಯುವ ಸಾಧ್ಯತೆಗಳಿವೆ’ ಎಂದು ಅವರು ಹೇಳಿದರು.

‘ಹಡ್ಸನ್ ವೃತ್ತದ ಬಳಿ ಇರುವ ಸಂಸ್ಥೆಯ ಶೀತಲ ಗೃಹದ ಆವರಣದಲ್ಲಿ ಮೇಳ ಉದ್ಘಾಟನೆಯಾಗಲಿದೆ. ಸಚಿವರಾದ ಎಸ್.ಎ.ರವೀಂದ್ರನಾಥ್, ಬಿ.ಎನ್.ಬಚ್ಚೇಗೌಡ, ಶಾಸಕ ಆರ್. ರೋಷನ್ ಬೇಗ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಜಿ.ಆರ್.ಶ್ರೀನಿವಾಸನ್, ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಪರಶಿವಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.