ADVERTISEMENT

ಇಂದಿರಾ ಪರಿಸರದ ಕೂಸು: ಜೈರಾಮ್‌

ಇಂದಿರಾ ಗಾಂಧಿ ಪ್ರಕೃತಿ ಸಾಂಗತ್ಯ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:30 IST
Last Updated 13 ಏಪ್ರಿಲ್ 2018, 19:30 IST
ಕೃತಿಯನ್ನು ಎಂ.ಎನ್‌.ವೆಂಕಟಾಚಲಯ್ಯ ಬಿಡುಗಡೆ ಮಾಡಿದರು. ಡಾ.ಮನು ಚಕ್ರವರ್ತಿ, ಕೆ.ಇ.ರಾಧಾಕೃಷ್ಣ, ಜೈರಾಮ್‌ ರಮೇಶ್‌, ಪ್ರಕಾಶಕ ವಿನಯ ಪಾಟೀಲ ಇದ್ದಾರೆ - ಪ್ರಜಾವಾಣಿ ಚಿತ್ರ
ಕೃತಿಯನ್ನು ಎಂ.ಎನ್‌.ವೆಂಕಟಾಚಲಯ್ಯ ಬಿಡುಗಡೆ ಮಾಡಿದರು. ಡಾ.ಮನು ಚಕ್ರವರ್ತಿ, ಕೆ.ಇ.ರಾಧಾಕೃಷ್ಣ, ಜೈರಾಮ್‌ ರಮೇಶ್‌, ಪ್ರಕಾಶಕ ವಿನಯ ಪಾಟೀಲ ಇದ್ದಾರೆ - ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಅವರ ‘ಇಂದಿರಾ ಗಾಂಧಿ– ಎ ಲೈಫ್‌ ಇನ್‌ ನೇಚರ್‌’ ಕೃತಿಯ ಕನ್ನಡ ಅನುವಾದ
‘ಇಂದಿರಾ ಗಾಂಧಿ– ಪ್ರಕೃತಿ ಸಾಂಗತ್ಯ’ವನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.

'ಇಂದಿರಾ ಗಾಂಧಿ ಅವರು ಪ್ರಕೃತಿಯ ಕೂಸು. ಪರಿಸರ ಸಂರಕ್ಷಣೆ ಅವರ ಜೀವನದ ಮುಖ್ಯ ಭಾಗವಾಗಿತ್ತು. ಪ್ರಕೃತಿ ರಕ್ಷತಿ ರಕ್ಷಿತಃ ಎಂಬುದು ಇಂದಿರಾ ನಿಲುವಾಗಿತ್ತು. ಪ್ರಕೃತಿ ಹಾಗೂ ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು ಎಂದು ನಂಬಿದ್ದರು’ ಎಂದು ಜೈರಾಮ್‌ ರಮೇಶ್‌ ಹೇಳಿದರು.

‘ಈ ಕೃತಿಯಲ್ಲಿ ಇಂದಿರಾ ಅವರನ್ನು ಐಕಾನ್‌ ರೀತಿಯಲ್ಲಿ ವೈಭವೀಕರಿಸಿಲ್ಲ. ಅವರ ವೈಯಕ್ತಿಕ, ರಾಜಕೀಯ, ಪರಿಸರಾತ್ಮಕ ಚರಿತ್ರೆಗಳನ್ನು ಎಳೆಎಳೆಯಾಗಿ ಹೆಣೆಯಲಾಗಿದೆ.

ADVERTISEMENT

ಕಠಿಣ ಹಾಗೂ ಸಂಕೀರ್ಣ ವಿಷಯವನ್ನು ಕನ್ನಡದ ನುಡಿಗಟ್ಟಿಗೆ ತರುವಲ್ಲಿ ರಾಧಾಕೃಷ್ಣ ಯಶಸ್ವಿಯಾಗಿದ್ದಾರೆ’ ಎಂದು ವಿಮರ್ಶಕ ಡಾ.ಮನು ಚಕ್ರವರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.

**

‘ಅನುವಾದ ತುಪ್ಪದ ರುಚಿಯಂತಿರಬೇಕು’

‘ಯಾವುದೇ ಕೃತಿಯ ಅನುವಾದವು ಎಣ್ಣೆಯ ರುಚಿಯಿಂದ ತುಪ್ಪದ ರುಚಿಗೆ ತೆಗೆದುಕೊಂಡು ಹೋಗುವಂತಿರಬೇಕು. ಈ ಕೆಲಸವನ್ನು ಕೆ.ಇ.ರಾಧಾಕೃಷ್ಣ ನಿಷ್ಠೆಯಿಂದ ಮಾಡಿದ್ದಾರೆ’ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.