ADVERTISEMENT

ಇಂದು ಕರಗ : ಸಂಚಾರ ಬದಲು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ನಡೆಯುವ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಹಾಗೂ ವಾಹನ ನಿಲುಗಡೆ ಸ್ಥಳಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನಗರ ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಗ ಉತ್ಸವವು ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟು ಮರಳಿ ದೇವಸ್ಥಾನವನ್ನು ತಲುಪುವವರೆಗೆ ಕೆ.ಆರ್.ಮಾರುಕಟ್ಟೆಯಿಂದ ಅವೆನ್ಯೂ ರಸ್ತೆ ಹಾಗೂ ಮೈಸೂರು ಬ್ಯಾಂಕ್ ವೃತ್ತದವರೆಗಿನ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪರ್ಯಾಯವಾಗಿ ವಾಹನ ಚಾಲಕರು ಎಸ್.ಜೆ.ಪಿ ರಸ್ತೆ, ಟೌನ್ ಹಾಲ್ ಹಾಗೂ ಕೆಂಪೇಗೌಡ ರಸ್ತೆ ಮಾರ್ಗವನ್ನು ಬಳಸಬಹುದಾಗಿದೆ.

ಕರಗ ಉತ್ಸವವು ಅವೆನ್ಯೂ ರಸ್ತೆ ಪ್ರವೇಶಿಸುತ್ತಿದ್ದಂತೆ ಎ.ಎಸ್.ಚಾರ್ ರಸ್ತೆಯಿಂದ ಕೆ.ಆರ್.ಮಾರುಕಟ್ಟೆ ವೃತ್ತದ ಕಡೆ ಸಂಚರಿಸುವ ವಾಹನಗಳು, ಮೈಸೂರು ರಸ್ತೆಯ ಎ.ಎಸ್.ಚಾರ್ ರಸ್ತೆಯಲ್ಲಿ ಬಲ ತಿರುವು ಪಡೆದು ಬ್ರಿಯಾಂಡ್ ವೃತ್ತ ಹಾಗೂ ರಾಯನ್ ವೃತ್ತದ ಮುಖಾಂತರ ಸಂಚರಿಸಬಹುದಾಗಿದೆ.

ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಬ್ರಿಯಾಂಡ್ ವೃತ್ತದಲ್ಲಿ ಬಲ ತಿರುವು ಪಡೆದು ರಾಯನ್ ವೃತ್ತ, ಮೆಡಿಕಲ್ ಕಾಲೇಜು ವೃತ್ತ ಹಾಗೂ ಪ್ರೊ.ಶಿವಶಂಕರ ರಾವ್ ವೃತ್ತದ ಮುಖಾಂತರ ಜೆ.ಸಿ.ರಸ್ತೆ ಪ್ರವೇಶಿಸಿ, ಮುಂದೆ ಸಾಗಬಹುದು.

ಕರಗವು ಕೆ.ಆರ್.ಮಾರುಕಟ್ಟೆ ವೃತ್ತದಿಂದ ಪೊಲೀಸ್ ರಸ್ತೆ ಮೂಲಕ ಹರಳೆಪೇಟೆಗೆ ಬರುವಾಗ, ಬಿ.ವಿ.ಕೆ ಅಯ್ಯಂಗಾರ್ ರಸ್ತೆಯ ಮೂಲಕ ಮೈಸೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳನ್ನು ಚಿಕ್ಕಪೇಟೆ ವೃತ್ತದಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಉತ್ಸವವು ಪೊಲೀಸ್ ರಸ್ತೆಯಲ್ಲಿ ಮುಂದೆ ಸಾಗಿ ಎ.ಎಸ್.ಚಾರ್ ಸ್ಟ್ರೀಟ್‌ನಲ್ಲಿ ಸಂಚರಿಸಬಹುದು.

ಕರಗವು ಕಾಶೀವಿಶ್ವನಾಥ ದೇವಸ್ಥಾನದಿಂದ ಬಳೇಪೇಟೆ ಮುಖ್ಯರಸ್ತೆಯ ಮೂಲಕ  ಸುಬೇದಾರ್ ಛತ್ರ ರಸ್ತೆಯಲ್ಲಿರುವ ಅಣ್ಣಮ್ಮದೇವಿ ದೇವಸ್ಥಾನಕ್ಕೆ ಬಂದು ಮತ್ತೆ ಅದೇ ಮಾರ್ಗವಾಗಿ, ಕಿಲಾರಿ ರಸ್ತೆ ಪ್ರವೇಶಿಸುವವರೆಗೆ  ಮೈಸೂರು ಬ್ಯಾಂಕ್ ವೃತ್ತದಿಂದ ಕೆಂಪೇಗೌಡ ರಸ್ತೆ ಕಡೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ಮೈಸೂರು ಬ್ಯಾಂಕ್ ವೃತ್ತ, ಸಾಗರ್ ಜಂಕ್ಷನ್‌ನಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಆನಂದ್‌ರಾವ್ ವೃತ್ತ , ಸಂಗಮ್ ಗಲ್ಲಿಯ ಮೂಲಕ ಕೆಂಪೇಗೌಡ ವೃತ್ತದ ಕಡೆಗೆ ಸಂಚರಿಸುವ ವಾಹನಗಳನ್ನು  ನಿರ್ಬಂಧಿಸಿದ್ದು, ವಾಹನ ಸವಾರರುಗಳು ವೈ.ರಾಮಚಂದ್ರ ರಸ್ತೆಯಲ್ಲಿ ಸಂಚರಿಸಬಹುದು.

ವಾಹನ ನಿಲುಗಡೆ ವ್ಯವಸ್ಥೆ

ಕರಗ ಉತ್ಸವವನ್ನು ವೀಕ್ಷಿಸಲು ಆಗಮಿಸುವಂತಹ ಸಾರ್ವಜನಿಕರು ಜೆ.ಸಿ.ರಸ್ತೆಯ ಬಿಬಿಎಂಪಿಯ ಪಾರ್ಕಿಂಗ್ ಲಾಟ್‌ನಲ್ಲಿ, ಕೆ.ಜಿ.ರಸ್ತೆಯಲ್ಲಿರುವ ಕೆಂಪೇಗೌಡ ಮಹಾರಾಜ ಪಾರ್ಕಿಂಗ್ ಕಾಂಪ್ಲೆಂಟ್ಸ್, ಮಾಮೂಲ್ ಪೇಟೆ ಮುಖ್ಯರಸ್ತೆಯಲ್ಲಿರುವ ಕೆಂಪೇಗೌಡ ಪಾರ್ಕಿಂಗ್ ಕಾಂಪ್ಲೆಕ್ಸ್, ಕೆಂಪೇಗೌಡ ಬಸ್ ನಿಲ್ದಾಣದಲ್ಲಿರುವ ಪಾರ್ಕಿಂಗ್ ಲಾಟ್‌ಗಳಲ್ಲಿ ನಿಲುಗಡೆ ಮಾಡಬಹುದಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.