ADVERTISEMENT

ಇಯಾನ್ ಫೆಲ್ಟನ್ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 18:55 IST
Last Updated 15 ಸೆಪ್ಟೆಂಬರ್ 2011, 18:55 IST

ಬೆಂಗಳೂರು: ರಾಜ್ಯದಲ್ಲಿ ನೂತನ ಬ್ರಿಟಿಷ್ ಉಪ ಹೈಕಮಿನಷರ್ ಆಗಿ ಇಯಾನ್ ಫೆಲ್ಟನ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ರಿಚರ್ಡ್ ಹೈಡ್ ಅವರ ಉತ್ತರಾಧಿಕಾರಿಯಾಗಿ ಫೆಲ್ಟನ್ ಅವರನ್ನು ಬ್ರಿಟನ್ ಸರ್ಕಾರ ನೇಮಕ ಮಾಡಿದೆ. ಇವರ ಅಧಿಕಾರಾವಧಿ ನಾಲ್ಕು ವರ್ಷಗಳು.

ಫೆಲ್ಟನ್ ಇದುವರೆಗೆ ಪಶ್ಚಿಮ ಆಫ್ರಿಕಾದ ಗಿನಿಯಾ ಗಣರಾಜ್ಯದಲ್ಲಿ ಬ್ರಿಟಿಷ್ ರಾಯಭಾರಿಯಾಗಿದ್ದರು.
ಅದಕ್ಕೂ ಹಿಂದೆ ಕಾಂಬೋಡಿಯಾ, ನ್ಯೂಯಾರ್ಕ್ ಮತ್ತು ಬ್ರಸೆಲ್ಸ್ ನಗರದಲ್ಲಿಯೂ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು.

ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಅವರು, `ಕರ್ನಾಟಕದಲ್ಲಿ ಬ್ರಿಟನ್ ಸರ್ಕಾರವನ್ನು ಪ್ರತಿನಿಧಿಸುತ್ತಿರುವುದು ಗೌರವದ ಸಂಗತಿಯಾಗಿದೆ. ಕಳೆದ ವರ್ಷ ಬೆಂಗಳೂರಿಗೆ ಭೇಟಿ ನೀಡಿದ್ದ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಭಾರತದೊಂದಿಗೆ ಬ್ರಿಟನ್ ಬಲಿಷ್ಠ, ವ್ಯಾಪಕ ಮತ್ತು ಆಳವಾದ ಸಂಬಂಧವನ್ನು ಹೊಂದಲು ಇಚ್ಛಿಸುತ್ತದೆ ಎಂದಿದ್ದರು. ಅವರ ಆಶಯಕ್ಕೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುತ್ತೇನೆ~ ಎಂದಿದ್ದಾರೆ.

`ಬೆಂಗಳೂರು ಭಾರತದ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಹಲವಾರು ಬ್ರಿಟಿಷ್ ಕಂಪೆನಿಗಳು ಇಲ್ಲಿ ವಹಿವಾಟು ನಡೆಸುತ್ತಿವೆ. ಜೊತೆಗೆ ಬೆಂಗಳೂರು ಮೂಲದ ಐಟಿ, ಟೆಲಿಕಾಂ, ಬಯೋಟೆಕ್, ವೈಮಾನಿಕ ಮತ್ತು ಹಣಕಾಸು ಸೇವೆಗಳನ್ನು ನೀಡುವ ಕಂಪೆನಿಗಳೂ ಬ್ರಿಟನ್‌ನಲ್ಲಿ ವಹಿವಾಟು ನಡೆಸುತ್ತಿವೆ~ ಎಂದು ತಿಳಿಸಿದ್ದಾರೆ.

`ನಮ್ಮ ವೈಜ್ಞಾನಿಕ ಮತ್ತು ಸಂಶೋಧನಾ ಪ್ರಕ್ರಿಯೆಗಳು ನಗರದಲ್ಲಿ ಬ್ರಿಟಿಷ್ ಕೌನ್ಸಿಲ್ ಮತ್ತು ಸಂಶೋಧನಾ ಮಂಡಳಿಗಳ ಮೂಲಕ ನಡೆಯುತ್ತಿವೆ. ಇವು ಭಾರತ ಮತ್ತು ಬ್ರಿಟನ್ ದೇಶಗಳ ಮಧ್ಯೆ ವಿಜ್ಞಾನ, ಸಂಶೋಧನೆ, ಶಿಕ್ಷಣ ಮತ್ತು ತರಬೇತಿಗಳನ್ನು ನೀಡುತ್ತಿವೆ~ ಎಂದು ಇಯಾನ್ ಫೆಲ್ಟನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.