ADVERTISEMENT

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮೇಳ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 19:30 IST
Last Updated 1 ಜುಲೈ 2012, 19:30 IST

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಬ್ಲೂ ಟೈಗರ್ ಸಂಸ್ಥೆಯ ಸಹಯೋಗದೊಂದಿಗೆ ನಗರದ ದಯಾನಂದ ಸಾಗರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶನಿವಾರ `ಇಂಟರ್ನ್‌ಶಿಪ್ ಮೇಳ~ ಆಯೋಜಿಸಿತ್ತು.

ಮೇಳವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಎನ್.ವಿಜಯಕುಮಾರ್, `ಉದ್ಯೋಗದಾತರು ಮತ್ತು ಉದ್ಯೋಗಕಾಂಕ್ಷಿಗಳಿಗೆ ಈ ಮೇಳವು ಉತ್ತಮ ರೀತಿಯಲ್ಲಿ ಸಂಪರ್ಕ ಸೇತುವೆಯಾಗುತ್ತದೆ. ಇಂತಹ ಮೇಳಗಳ ಬಗ್ಗೆ  ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸಬೇಕು~ ಎಂದು ಸಲಹೆ ನೀಡಿದರು.

ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಮಹೇಶಪ್ಪ, `ವಿದ್ಯಾರ್ಥಿಗಳಿಗೆ ಔದ್ಯೋಗಿಕ ಕ್ಷೇತ್ರಕ್ಕೆ ತೆರೆದುಕೊಳ್ಳಲು ಇಂಟರ್ನ್‌ಶಿಪ್ ಮೇಳಗಳು ಸಹಾಯಕಾರಿಯಾಗಿದ್ದು, ಕೌಶಲ, ತರಬೇತಿಯಿಂದ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳಲು ಸಾಧ್ಯವಿದೆ~ ಎಂದು ಹೇಳಿದರು.

ತಾಂತ್ರಿಕ ಮತ್ತು ತಾಂತ್ರಿಕೇತರ ಹಾಗೂ ಆಡಳಿತ ನಿರ್ವಹಣಾ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಕಂಪೆನಿಗಳಾದ ಆದಿತ್ಯ ಬಿರ್ಲಾ, ಬಿಜಿಎಸ್ ಸಮೂಹ ಸಂಸ್ಥೆ,  ಡ್ರೀಮ್ ಗೇನ್, ವ್ಯಾಲು ಲೀಫ್, ಮೀಡಿಯಾ ಗ್ರೂಪ್,   ಸೇರಿದಂತೆ ಸುಮಾರು ಸುಮಾರು 50ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿದ್ದವು.
ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಬಿ.ಸಿ.ಮೈಲಾರಪ್ಪ, ಬ್ಲೂ ಟೈಗರ್ ಸಂಸ್ಥೆಯ ಕಾರ್ಯನಿರ್ವಾಹಕಾಧಿಕಾರಿ ಸಂಪತ್ ಅಯ್ಯಂಗಾರ್ ಇತರರು ಉಪಸ್ಥಿತರಿದ್ದರು.

ಕೆಲವು ಕಂಪೆನಿಗಳು ವಾರಾಂತ್ಯ ಹಾಗೂ ತಿಂಗಳುಗಳ ಕಾಲ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮಾಡಲು ಅವಕಾಶ ನೀಡಲಿದೆ. ಆಸಕ್ತರು ಮಾಹಿತಿಗೆ  www.bluetiger.in  ಮೊಬೈಲ್:  92436 22152.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.