ADVERTISEMENT

‘ಎಫ್‌.ಎಂ.ಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿ’

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 20:07 IST
Last Updated 10 ಅಕ್ಟೋಬರ್ 2017, 20:07 IST
ಜಿ.ಮನೋಹರನ್ ನಾಯ್ಡು ಹಾಗೂ ಪತ್ನಿ ಸರಸ್ವತಿ ಅವರನ್ನು ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ
ಜಿ.ಮನೋಹರನ್ ನಾಯ್ಡು ಹಾಗೂ ಪತ್ನಿ ಸರಸ್ವತಿ ಅವರನ್ನು ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಗರದಲ್ಲಿನ ಎಫ್‌.ಎಂ. ಸಂಗೀತ ವಾಹಿನಿಗಳಲ್ಲಿ ಕನ್ನಡ ಚಿತ್ರಗೀತೆಗಳಿಗೆ ಹೆಚ್ಚಿನ ಆದ್ಯತೆ ಸಿಗಬೇಕು’ ಎಂದು ಲಹರಿ ಆಡಿಯೊ ಕಂಪೆನಿಯ ಮುಖ್ಯಸ್ಥ ಜಿ.ಮನೋಹರನ್‌ ನಾಯ್ಡು ಹೇಳಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಫ್‌.ಎಂ.ವಾಹಿನಿಗಳು ಕನ್ನಡ ಹಾಡುಗಳನ್ನು ಪ್ರಸಾರ ಮಾಡುವುದಾಗಿ ಪರವಾನಗಿ ಪಡೆದಿವೆ. ಆದರೆ, ಹಿಂದಿ ಹಾಡುಗಳನ್ನು ಸಹ ಪ್ರಸಾರ ಮಾಡುತ್ತಿವೆ. ಇದರಿಂದ ಕನ್ನಡ ಮತ್ತು ಚಿತ್ರರಂಗಕ್ಕೂ ನಷ್ಟವಾಗುತ್ತಿದೆ’ ಎಂದರು.

ADVERTISEMENT

ಇದಕ್ಕೆ ಅಕಾಡೆಮಿಯ ಅಧ್ಯಕ್ಷ ರಾಜೇಂದ್ರಸಿಂಗ್‌ ಬಾಬು ಪ್ರತಿಕ್ರಿಯಿಸಿ, ‘ಮೆಟ್ರೊ ಸಾರಿಗೆ, ಮಲ್ಟಿಪ್ಲೆಕ್ಸ್‌ ಮತ್ತು ಎಫ್‌.ಎಂ. ವಾಹಿನಿಗಳಲ್ಲಿ ಕನ್ನಡ ಕಡೆಗಣಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಕಾಡೆಮಿಯ ಪದಾಧಿಕಾರಿಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೊಂದಿಗೆ ವಾಹಿನಿಗಳ ಕಚೇರಿಗಳಿಗೆ ಹೋಗಿ ತಿಳಿಹೇಳುತ್ತೇವೆ’ ಎಂದರು.

‘ಸಿನಿಮಾ ಸಂಗೀತಕ್ಕಿಂತ ಭಕ್ತಿ, ಜನಪದ ಹಾಗೂ ಭಾವಗೀತೆಯ ಆಡಿಯೊ ಕ್ಯಾಸೆಟ್‌ಗಳನ್ನು ರೂಪಿಸಿದ್ದು ಹೆಚ್ಚು ಸಂತಸ, ನೆಮ್ಮದಿ ನೀಡಿದೆ’ ಎಂದು ಮನೋಹರನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.