ADVERTISEMENT

ಎಲ್.ಜಿ.ಶಿವಕುಮಾರ್ ನಿಧನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST
ಎಲ್.ಜಿ.ಶಿವಕುಮಾರ್ ನಿಧನ
ಎಲ್.ಜಿ.ಶಿವಕುಮಾರ್ ನಿಧನ   

ಬೆಂಗಳೂರು:  ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿದ್ದ ಎಲ್.ಜಿ.ಶಿವಕುಮಾರ್ (56) ಅವರು ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾದರು.

ಮೃತರು, ಪತ್ನಿ ಕೃಷ್ಣಕುಮಾರಿ ಹಾಗೂ ಕರ್ಣ ಎಂಬ ಪುತ್ರನನ್ನು ಅಗಲಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಶಿವಕುಮಾರ್ ಅವರನ್ನು ಸೋಮವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ರಾತ್ರಿ ಒಂದು ಗಂಟೆಗೆ ಕೊನೆಯುಸಿರೆಳೆದರು. ಅವರ ಇಚ್ಛೆಯಂತೆಯೇ ಮೃತದೇಹ ಹಾಗೂ ಕಣ್ಣುಗಳನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಗಿದೆ.

ಸುಮಾರು 30 ವರ್ಷಗಳ ಕಾಲ ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದ ಶಿವಕುಮಾರ್, ಅನೇಕ ನಾಟಕಗಳನ್ನು ರಚಿಸಿದ್ದಾರೆ. ಈ ಪೈಕಿ ಏಳು ನಾಟಕಗಳು ಪ್ರಕಟವಾಗಿವೆ. ಅಲ್ಲದೇ, ಯಲಹಂಕದಲ್ಲಿರುವ ಮಾತೃ ಅಂಧರ ಸಂಸ್ಥೆಯ ಅಂಧ ಮಕ್ಕಳಿಗೆ ಉಚಿತವಾಗಿ ನಾಟಕ ತರಬೇತಿ ನೀಡಿದ್ದರು.

ಅವರು ದೂರದರ್ಶನದಲ್ಲಿ 2002ರಿಂದ ಪ್ರಾರಂಭವಾದ `ಬೆಳಗು' ಕಾರ್ಯಕ್ರಮದ ರೂವಾರಿಯೂ ಆಗಿದ್ದರು. ಈ ಕಾರ್ಯಕ್ರಮ 4,700 ಕಂತುಗಳನ್ನು ಪೂರೈಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.