ADVERTISEMENT

ಐಐಎಂಬಿಗೆ ‘ಹೂಡಿಕೆ ಒಲಿಂಪಿಯಾಡ್‌’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST
ಸಿಎಫ್ಎ ಸಂಸ್ಥೆಗಳ ಸಂಶೋಧನಾ ಸ್ಪರ್ಧೆಯಲ್ಲಿ (ಹೂಡಿಕೆ ಒಲಿಂಪಿಯಾಡ್‌ 2013–14) ಪ್ರಶಸ್ತಿ ಗಳಿಸಿದ ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳಾದ ಸೌಮ್ಯಾ ಗುಪ್ತ, ಅಭಿಷೇಕ್‌ ಅಗರವಾಲ್‌, ಸಾಕ್ಷಿ ಮಹಾಜನ್‌, ಸಿದ್ಧಾರ್ಥ ಅಗರವಾಲ್‌ ಹಾಗೂ ಪ್ರತೀಕ್‌ ಜೈಪುರಿಯಾರ್‌ ಅವರನ್ನು ಸಂಸ್ಥೆಯ ಹಂಗಾಮಿ ನಿರ್ದೇಶಕ ದೇವನಾಥ ತಿರುಪತಿ ಅಭಿನಂದಿಸಿದರು. ಪ್ರಾಧ್ಯಾಪಕ ಪ್ರೊ.ಪಿ.ಸಿ. ನಾರಾಯಣ್‌ ಚಿತ್ರದಲ್ಲಿದ್ದಾರೆ

ಬೆಂಗಳೂರು: ನಗರದ ಇಂಡಿಯನ್‌ ಇನ್‌ಸ್ಟಿ­ಟ್ಯೂಟ್‌ ಆಫ್‌ ಮ್ಯಾನೇಜ್‌­ಮೆಂಟ್‌ನ (ಐಐಎಂಬಿ) ಐವರು ವಿದ್ಯಾ­ರ್ಥಿ­ಗಳ ತಂಡವು ಸಿಎಫ್‌ಎ ಸಂಸ್ಥೆಗಳ ಸಂಶೋ­ಧನಾ ಸ್ಪರ್ಧೆಯಲ್ಲಿ (ಹೂಡಿಕೆ ಒಲಿಂಪಿ­ಯಾಡ್‌ 2013–14) ಪ್ರಶಸ್ತಿ ಗಳಿಸಿದೆ.

ತಂಡದಲ್ಲಿ ಸೌಮ್ಯಾ ಗುಪ್ತ, ಪ್ರತೀಕ್‌ ಜೈಪುರಿ­ಯಾರ್‌, ಸಾಕ್ಷಿ ಮಹಾಜನ್‌, ಸಿದ್ಧಾರ್ಥ ಅಗರ­ವಾಲ್‌, ಅಭಿಷೇಕ್‌ ಅಗರ­ವಾಲ್‌ ಇದ್ದರು. ಸಿಂಗಪು­ರದಲ್ಲಿ ಏಪ್ರಿಲ್‌­ನಲ್ಲಿ ನಡೆಯಲಿರುವ ಏಷ್ಯಾ– ಫೆಸಿ­ಫಿಕ್‌ ಮಟ್ಟದ ಫೈನಲ್‌ ಸ್ಪರ್ಧೆಯಲ್ಲಿ ಈ ತಂಡ ಪಾಲ್ಗೊಳ್ಳಲಿದೆ.

ಈ ಸ್ಪರ್ಧೆ ಜಾಗತಿಕ ಮಟ್ಟದಲ್ಲಿ ನಡೆಯು­ತ್ತಿದೆ. ಹೂಡಿಕೆ ಸಂಶೋಧನೆ, ಮೌಲ್ಯ­ಮಾಪನ, ಹೂಡಿಕೆ ವರದಿ ತಯಾ­ರಿಕೆ ಮತ್ತಿತರ ವಿಷಯಗಳಲ್ಲಿ ವಿದ್ಯಾ­ರ್ಥಿ­ಗಳ ಕೌಶಲದ ಪರೀಕ್ಷೆ ನಡೆಸಲಾಗುತ್ತದೆ.

ಐಐಎಂಬಿ ತಂಡವು ಆರಂಭದಲ್ಲಿ ದಕ್ಷಿಣ ವಲಯದ ಪ್ರಶಸ್ತಿ ಗಳಿಸಿತ್ತು. ಐಎಂಬಿ ಅಹಮದಾಬಾದ್‌, ಐಎಸ್‌ಬಿ ಸೇರಿ­ದಂತೆ ದೇಶದ ವಿವಿಧ ಆಡಳಿತ ನಿರ್ವ­ಹಣಾ ಸಂಸ್ಥೆಗಳು ಫೈನಲ್‌ನಲ್ಲಿ ಭಾಗ­ವಹಿಸಿದ್ದವು. ಐಐಎಂಬಿ ಪ್ರಾಧ್ಯಾ­ಪಕ ಪ್ರೊ.ಪಿ.ಸಿ.ನಾರಾಯಣ್‌ ಅವರು ತಂಡಕ್ಕೆ ಸಲಹೆಗಾರರು ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.