ADVERTISEMENT

`ಕಮ್ಮೋವರಿ ನಿರ್ಲಕ್ಷ್ಯ'

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST

ಬೆಂಗಳೂರು: `ಸಮಾಜದ ಮುಖಂಡರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದೆ ರಾಷ್ಟ್ರೀಯ ಪಕ್ಷಗಳು ಕಮ್ಮೋವರಿ (ಕಮ್ಮ ನಾಯ್ಡು) ಜನಾಂಗ ವನ್ನು ಸಂಪೂರ್ಣ ಕಡೆಗಣಿಸಿವೆ' ಎಂದು ರಾಜ್ಯ ಸಂಘದ  ಮುಖಂಡ ಪಿ.ವಿ.ಕುಪ್ಪುಸ್ವಾಮಿ ನಾಯ್ಡು ದೂರಿದರು.

ಕಮ್ಮಾವರಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯಕ್ಕೆ ಆಗ್ರಹಿಸಿ ಕಬ್ಬನ್ ಉದ್ಯಾನದಲ್ಲಿ ಬುಧವಾರ ನಡೆದ ಸಾಂಕೇತಿಕ ಧರಣಿಯಲ್ಲಿ ಅವರು ಮಾತನಾಡಿದರು.

`ಸಮಾಜದ ಡಾ.ಬಿ.ಗುರಪ್ಪ ನಾಯ್ಡು, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್.ವಿ.ಹರೀಶ್, ದಿವಾಕರ್ ಬಾಬು ಮತ್ತಿತರರಿಗೆ ಟಿಕೆಟ್ ಕೊಡದೆ ಅನ್ಯಾಯ ಮಾಡಲಾಗಿದೆ' ಎಂದರು.

ಸಂಘದ ಅಧ್ಯಕ್ಷ ಕೆ.ಎಸ್. ಸುಬ್ರಹ್ಮಣ್ಯ, ಕಾರ್ಯದರ್ಶಿ ಎಸ್.ರಾಮಚಂದ್ರ ನಾಯ್ಡು, ಕಮ್ಮ ಸೇವಾ ಸಮಿತಿಯ ರುಕ್ಮಾಂಗದ ನಾಯ್ಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.