
ಪ್ರಜಾವಾಣಿ ವಾರ್ತೆಕೆಂಗೇರಿ: ನಗರದ ಮಾಗಡಿ ರಸ್ತೆಯ ಕಾಮಾಕ್ಷಿಪಾಳ್ಯ ವಾರ್ಡ್‌ನ ವ್ಯಾಪ್ತಿಯ ಕರೇಕಲ್ ಪ್ರದೇಶದಲ್ಲಿ ಸುಮಾರು ನಲವತ್ತು ವರ್ಷಗಳಿಂದ ವಾಸಿಸುತ್ತಿರುವ 245 ಕುಟುಂಬಗಳಿಗೆ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ಹಕ್ಕು ಪತ್ರಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಕರೇಕಲ್ ಪ್ರದೇಶದ ನಾಗರಿಕರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಶೇ 22.75 ಅನುದಾನದಡಿ 102 ಮನೆಗಳನ್ನು ನಿರ್ಮಿಸಿಕೊಡಲು ಪಾಲಿಕೆ ಜತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.
ಪಾಲಿಕೆ ಸದಸ್ಯರಾದ ಕೆ.ರಂಗಣ್ಣ, ಎಚ್.ಆರ್.ಕೃಷ್ಣಪ್ಪ, ಉಪ ಆಯುಕ್ತ ರಮಾಕಾಂತ್, ಮುಖಂಡ ಅನಿಲ್ ರಂಗಣ್ಣ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.