ADVERTISEMENT

ಕಳ್ಳರ ಸೆರೆ: ₹ 25 ಲಕ್ಷ ಜಪ್ತಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 19:55 IST
Last Updated 24 ಮಾರ್ಚ್ 2018, 19:55 IST

ಬೆಂಗಳೂರು: ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ನಗ–ನಾಣ್ಯ ದೋಚುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರು ಹಾಗೂ ಅವರಿಂದ ಒಡವೆ ಖರೀದಿಸುತ್ತಿದ್ದ ಆಭರಣ ವ್ಯಾಪಾರಿಗಳಿಬ್ಬರನ್ನು ಬಂಧಿಸಿರುವ ಜಯನಗರ ಪೊಲೀಸರು, ₹ 25 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಮಳವಳ್ಳಿಯ ಸಿದ್ದು ಅಲಿಯಾಸ್ ನಾಗರಾಜ್ (25), ಇಟ್ಟಮಡುವಿನ ಸತೀಶ್ ಅಲಿಯಾಸ್ ಸತ್ಯವೇಲು (43), ಉತ್ತರಹಳ್ಳಿಯ ಬಾಬು (25) ಹಾಗೂ ಕತ್ರಿಗುಪ್ಪೆಯ ಸುರೇಶ್ (32) ಬಂಧಿತರು. ಇವರ ಬಂಧನದಿಂದ ರಾಜರಾಜೇಶ್ವರಿನಗರ, ಕೋಣನಕುಂಟೆ ಹಾಗೂ ಬಸವೇಶ್ವರನಗರ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣವೊಂದರ ಸಂಬಂಧ ಮೈಕೊಲೇಔಟ್ ಪೊಲೀಸರು 2015ರಲ್ಲಿ ಸಿದ್ದುನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಅದೇ ವೇಳೆ ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಸತೀಶ್ ಜೈಲು ಸೇರಿದ್ದ. ಕಾರಾಗೃಹದಲ್ಲಿ ಒಂದೇ ಬ್ಯಾರಕ್‌ನಲ್ಲಿದ್ದ ಇವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು.

ADVERTISEMENT

ಹಗಲು ವೇಳೆ ಪ್ರತಿಷ್ಠಿತ ರಸ್ತೆಗಳಲ್ಲಿ ಓಡಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದ ಇವರು, ರಾತ್ರಿ ಬೀಗ ಮುರಿದು ಆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದರು. ನಂತರ ಒಡವೆಗಳನ್ನು ಬಾಬು ಹಾಗೂ ಸುರೇಶ್ ಅವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ, ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.