ADVERTISEMENT

ಕಸದ ಸಮಸ್ಯೆ: ನಾಳೆ ಗೃಹ ಸಚಿವರ ಭೇಟಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2012, 19:30 IST
Last Updated 5 ನವೆಂಬರ್ 2012, 19:30 IST
ಕಸದ ಸಮಸ್ಯೆ: ನಾಳೆ ಗೃಹ ಸಚಿವರ ಭೇಟಿ
ಕಸದ ಸಮಸ್ಯೆ: ನಾಳೆ ಗೃಹ ಸಚಿವರ ಭೇಟಿ   

ದೊಡ್ಡಬಳ್ಳಾಪುರ: ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಸವನ್ನು ತಾಲ್ಲೂಕಿನ ಗುಂಡ್ಲಹಳ್ಳಿ ಗ್ರಾಮದ ಸಮೀಪ ಸುರಿಯಲು ಬಿಡುವುದಿಲ್ಲ ಎಂದು ಸ್ಥಳೀಯರ, ಸಂಘಸಂಸ್ಥೆಗಳು ಕೈಗೊಂಡಿರುವ ನಿರ್ಣಯ ಹಾಗೂ ಅಲ್ಲಿನ ಸಮಸ್ಯೆಗಳನ್ನು ಗೃಹಸಚಿವ ಆರ್.ಅಶೋಕ್ ಅವರಿಗೆ ಮನವರಿಕೆ ಮಾಡಿಕೊಡಲು ನ.7ರಂದು ಸಂಜೆ 4 ಗಂಟೆಗೆ ಭೇಟಿ ಮಾಡಲಾಗುವುದು ಎಂದು ಶಾಸಕ ಜೆ.ನರಸಿಂಹಸ್ವಾಮಿ ಹೇಳಿದರು.

ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ವಿವಿಧ ಸಂಘಟನೆಗಳ ಮುಖಂಡರು, ದೊಡ್ಡಬೆಳವಂಗಲ ಹೋಬಳಿ ಮುಖಂಡರ ಸಭೆಯ ನಂತರ ಅವರು ಮಾಹಿತಿ ನೀಡಿದರು.

ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವವರೆಗೂ ಮತ್ತೆ ಇಲ್ಲಿಗೆ ಕಸ ತಂದು ಸುರಿಯಲು ಅವಕಾಶ ನೀಡುವುದಿಲ್ಲ. ಇಲ್ಲಿನ ಕಸದ ಸಮಸ್ಯೆಯನ್ನು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲು ಬೆಂಗಳೂರು ಮೇಯರ್, ಆಯುಕ್ತರು, ಗೃಹ ಸಚಿವರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.