ADVERTISEMENT

ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ‘ಬಿ’ ಫಾರ್ಮ್‌ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿಯುವ ಬಹುತೇಕ ಅಭ್ಯರ್ಥಿ­ಗಳಿಗೆ ಬುಧವಾರ ಪಕ್ಷದ ‘ಬಿ’ ಫಾರ್ಮ್ ವಿತರಿಸಲಾಗಿದೆ. ಕೆಲವರು ಖುದ್ದಾಗಿ ‘ಬಿ’ ಫಾರ್ಮ್‌ ಪಡೆದರೆ, ಇನ್ನು ಕೆಲವರು ತಮ್ಮ ಪ್ರತಿನಿಧಿಗಳ ಮೂಲಕ ತರಿಸಿಕೊಂಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರು ಪಕ್ಷದ ಕಚೇರಿಯಲ್ಲಿ ‘ಬಿ’ ಫಾರ್ಮ್‌ ವಿತರಿಸಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ ಡಿ.ಕೆ.ಸುರೇಶ್‌, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಶಾಸಕ ಎ.ಮಂಜು ಮತ್ತಿತರರು ಖುದ್ದಾಗಿ ‘ಬಿ’ ಫಾರ್ಮ್‌ ಸ್ವೀಕರಿಸಿದ್ದಾರೆ.

ನಿಲೇಕಣಿಗೆ ಶುಕ್ರವಾರ ‘ಬಿ’ ಫಾರ್ಮ್: ಬೆಂಗಳೂರು ದಕ್ಷಿಣ ಲೋಕ­ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಂದನ್‌ ನಿಲೇಕಣಿ ಅವರು ಇನ್ನೂ ‘ಬಿ’ ಫಾರ್ಮ್‌ ಪಡೆದು­ಕೊಂಡಿಲ್ಲ. ಶನಿವಾರ ಅವರು ನಾಮ­ಪತ್ರ ಸಲ್ಲಿಸಲಿದ್ದು, ಶುಕ್ರವಾರ ಕೆಪಿಸಿಸಿ ಅಧ್ಯಕ್ಷರಿಂದ ‘ಬಿ’ ಫಾರ್ಮ್ ಪಡೆದು­ಕೊಳ್ಳುವರು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.