ADVERTISEMENT

ಕಾಂಗ್ರೆಸ್‌ ವಿರುದ್ಧ ಮತ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST

ಬೆಂಗಳೂರು: ಬಡ್ತಿ ಮೀಸಲು ಕಾಯ್ದೆ–2002 ಅನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್‌ 2017 ಫೆಬ್ರುವರಿ 9ರಂದು ನೀಡಿದ ತೀರ್ಪು ಅನುಷ್ಠಾನಗೊಳಿಸಲು ಕಾಂಗ್ರೆಸ್‌ ಸರ್ಕಾರ ಹಿಂದೇಟು ಹಾಕುತ್ತಿರುವುದರ ವಿರುದ್ಧ ಅಹಿಂಸಾ (ಅಲ್ಪ ಸಂಖ್ಯಾತರು, ಹಿಂದುಳಿದ, ಸಾಮಾನ್ಯ ವರ್ಗ) ಸರ್ಕಾರಿ ನೌಕರರ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸಂಘಟನೆಯ ಮೊದಲ ವಾರ್ಷಿಕೋತ್ಸ ನಗರದಲ್ಲಿ ಸೋಮವಾರ ನಡೆಯಿತು. ಸುಪ್ರೀಂ ಕೋರ್ಟ್‌ ತೀರ್ಪುನ್ನು ಏಪ್ರಿಲ್‌ 16ರೊಳಗೆ ಅನುಷ್ಠಾನಗೊಳಿಸುವಂತೆ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ ಅವರು ಎಲ್ಲ ಇಲಾಖೆಗಳಿಗೆ ಸುತ್ತೋಲೆ ಹೊರಡಿದ್ದರೂ ಅದು, ಜಾರಿ ಆಗುವುದು ಅನುಮಾನ, ಅಲ್ಲದೆ, ಜೇಷ್ಠತಾ ಪಟ್ಟಿಯಲ್ಲೂ ಹಲವು ಲೋಪಗಳಿವೆ. ಇದನ್ನು ಸರಿಪಡಿಸಲು ಕೆಲವು ಇಲಾಖೆಗಳ ಮುಖ್ಯಸ್ಥರು ಹಿಂದೇಟು ಹಾಕುತ್ತಿರುವುದು ಕಾರ್ಯಕ್ರಮದಲ್ಲಿ ಚರ್ಚೆ ಬಂತು.

‘ಚುನಾವಣೆಯ ನೆಪ ಮುಂದಿಟ್ಟು ತೀರ್ಪು ಅನುಷ್ಠಾನಗೊಳಿಸಲು ಇನ್ನೂ ಎರಡೂ ತಿಂಗಳ ಕಾಲಾವಕಾಶ ಕೇಳಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಕಾಂಗ್ರೆಸ್‌ ಸರ್ಕಾರಕ್ಕೆ ತೀರ್ಪು ಜಾರಿಗೊಳಿಸಲು ಆಸಕ್ತಿ ಇಲ್ಲ.
ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಮತ ಚಲಾಯಿಸಲು ಕಾರ್ಯಕ್ರಮದಲ್ಲಿ ಒಕ್ಕೋರಲಿನ ತೀರ್ಮಾನ ಕೈಗೊಳ್ಳಲಾಗಿದೆ‘ ಎಂದು ಅಹಿಂಸಾ ಅಧ್ಯಕ್ಷ ಎಂ. ನಾಗರಾಜ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.