ADVERTISEMENT

ಕಾವಲುರಹಿತ ರೈಲ್ವೆ ಕ್ರಾಸಿಂಗ್‌: ದುರಂತ ತಡೆಗೆ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 19:50 IST
Last Updated 26 ಅಕ್ಟೋಬರ್ 2017, 19:50 IST
ಕಾವಲುರಹಿತ ರೈಲ್ವೆ ಕ್ರಾಸಿಂಗ್‌: ದುರಂತ ತಡೆಗೆ ತಂತ್ರಜ್ಞಾನ
ಕಾವಲುರಹಿತ ರೈಲ್ವೆ ಕ್ರಾಸಿಂಗ್‌: ದುರಂತ ತಡೆಗೆ ತಂತ್ರಜ್ಞಾನ   

ಬೆಂಗಳೂರು: ಕಾವಲುಗಾರರಹಿತ ರೈಲ್ವೆ ಕ್ರಾಸಿಂಗ್‌ನಿಂದ ಸಂಭವಿಸುವ ಅಪಾಯ ತಪ್ಪಿಸಲು ಸಿಎಂಆರ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.

ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ (ಐಒಟಿ) ಆಧರಿತವಾದ ಸಾಧನ ಮೂರು ಹಂತಗಳಲ್ಲಿ ಸುರಕ್ಷತೆಯ ಎಚ್ಚರಿಕೆಗಳನ್ನು ನೀಡುತ್ತದೆ. ಮೊದಲು ಆಪ್ಟಿಕರ್‌ ಸೆನ್ಸರ್‌ ಸೂಚನೆಯಿಂದ ಗೇಟು ಮುಚ್ಚಿಕೊಳ್ಳುತ್ತದೆ. ನಂತರದ ಹಂತದಲ್ಲಿ ಒತ್ತಡ ಆಧರಿಸಿ ರೇಡಿಯೊ ತರಂಗಗಳ ಮೂಲಕ ಕೆಂಪು ದೀಪ ಬೆಳಗುವ ಹಾಗೂ ಗಂಟೆ ಬಾರಿಸುವ ಮೂಲಕ ಎಚ್ಚರಿಸಲಾಗುತ್ತದೆ. 2 ಕಿ.ಮೀ ದೂರದವರೆಗೆ ಸೆನ್ಸರ್‌ ಸಿಗುತ್ತದೆ.

ಈ ಮಾದರಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಕೇಂದ್ರ ರೈಲ್ವೆ ಸಚಿವಾಲಯ ಆಯ್ಕೆ ಮಾಡಿಕೊಂಡಿದೆ. ಎಬಿವಿಪಿ ಮೇನಲ್ಲಿ ಆಯೋಜಿಸಿದ್ದ ‘ಸೃಷ್ಟಿ –2017’ರಲ್ಲಿ ಈ ತಂಡ ಭಾಗವಹಿಸಿ ಮೊದಲ ಸ್ಥಾನ ಪಡೆದಿತ್ತು. ಅಲ್ಲದೆ, ವಿಶ್ವದ ಅತಿದೊಡ್ಡ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ಗೆ ಆಯ್ಕೆಯಾಗಿದೆ.

ADVERTISEMENT

ಈ ತಂಡದಲ್ಲಿ ಮಾಳವಿಕಾ ವಿನಯ್, ಇಶಾನ್ ಅಭಿನವ್, ಆದಿತ್ಯ ನಿರಂಜನ್, ಪಿ. ಮಿಶಾ , ರೇನಿ ಜೈನ್, ಕೆ.ಎಂ. ಮಧುಸೂದನ್ ಅವರು ಇದ್ದಾರೆ. ಡಾ.ಸುಧೀರ್ ರೌಟ್ರೆ, ಪ್ರೊ. ಕೆ.ಪಿ. ಶರ್ಮಿಳಾ, ಪ್ರೊ.ರಾಹುಲ್ ನ್ಯಾಮಗೌಡರ್ ಮಾರ್ಗದರ್ಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.