ಬೆಂಗಳೂರು: `ಸಮಾಜದ ಬೆಳವಣಿಗೆ, ಸ್ವಾಸ್ಥ್ಯಕ್ಕೆ ಪೂರಕವಾಗಿ ಸೇವೆ ಸಲ್ಲಿಸುವಂತಹ ಶಿಕ್ಷಣ, ಆರೋಗ್ಯ, ವಿದ್ಯುತ್, ನೀರು ಪೂರೈಕೆ ವಲಯಗಳು ಸರ್ಕಾರದ ಅಧೀನದಲ್ಲಿಯೇ ಇರಬೇಕು. ಈ ಕ್ಷೇತ್ರಗಳು ಖಾಸಗೀಕರಣವಾದಲ್ಲಿ ದೇಶ ಅಧೋಗತಿಗೆ ತಲುಪಲಿದೆ~ ಎಂದು ಹಿರಿಯ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಗುರುವಾರ ಎಚ್ಚರಿಸಿದರು.
ಬೆಂಗಳೂರು ಜಲಮಂಡಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಬಿ.ಆರ್. ಅಂಬೇಡ್ಕರ್ ಅವರ 121ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ವಿ.ವಿ.ಯ ಡಾ. ರಘುನಂದನ್, ಜಲಮಂಡಳಿ ಅಧ್ಯಕ್ಷರಾದ ಗೌರವ್ ಗುಪ್ತ ಮಾತನಾಡಿದರು. ಮುಖ್ಯ ಎಂಜಿನಿಯರ್ ಬಸವರಾಜು ಅವರನ್ನು ಅಭಿನಂದಿಸಲಾಯಿತು. ಚಿಕ್ಕವೀರಯ್ಯ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.