ADVERTISEMENT

ಗಾಂಧೀಜಿ ಆದರ್ಶಗಳು ಪ್ರಸ್ತುತ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಬೆಂಗಳೂರು: `ಮಹಾತ್ಮ ಗಾಂಧೀಜಿ ಬ್ರಿಟಿಷರ ಗುಂಡಿನೇಟಿಗೂ ಜಗ್ಗದೆ ಎದೆಯೊಡ್ಡಿ ನಿಂತರು. ಅದರ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು~ ಎಂದು ಕಾಂಗ್ರೆಸ್ ಪಕ್ಷದ ನಗರ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಸಿ.ವಿ. ರಾಮನ್‌ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಜನ್ಮದಿನಾಚರಣೆ ಹಾಗೂ ಬ್ಲಾಕ್ ಅಧ್ಯಕ್ಷರ ನೂತನ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು  ಮಾತನಾಡಿದರು.

`ಗಾಂಧೀಜಿಯವರ ಆದರ್ಶಗಳು ಪ್ರಸಕ್ತ ಸನ್ನಿವೇಶದಲ್ಲಿ ಎಲ್ಲರಿಗೂ ಅಗತ್ಯವಾಗಿವೆ. ಆದರೆ ರಾಜಕೀಯ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ~ ಎಂದು ಅವರು ವಿಷಾದಿಸಿದರು.ಶಾಸಕ ಎನ್.ಎ.ಹ್ಯಾರಿಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ವಿ. ರಾಮನ್‌ನಗರದ ಶ್ರಿಧರ್, ಇಂದಿರಾನಗರದ ಶ್ರೀನಿವಾಸ್, ಮಾಜಿ ಸಚಿವ

ಜೆ.ಅಲೆಗ್ಸಾಂಡರ್, ಮಾಜಿ ಮೇಯರ್ ವಿಜಯಕುಮಾರ್, ಎಐಸಿಸಿ ಸದಸ್ಯ ವಿ.ಶಂಕರ್, ಕಾಂಗ್ರೆಸ್ ಮುಖಂಡರಾದ ರಾಮಚಂದ್ರರೆಡ್ಡಿ, ಚಂದ್ರಶೇಖರ್‌ರೆಡ್ಡಿ, ಎಲ್. ನಾರಾಯಣರೆಡ್ಡಿ, ಸಿ.ವಿ. ರಾಮನ್‌ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಆನಂದ, ವಾರ್ಡ್ ಅಧ್ಯಕ್ಷ ಶಂಕರ್, ಡಿಸಿಸಿ ಸದಸ್ಯ ಮುನಿರಾಜ್ ಹಾಗೂ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.