ADVERTISEMENT

ಗುರುಪರಂಪರಾ ವಿದ್ಯಾಲಯದಲ್ಲಿ ಸಂಸ್ಕೃತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 19:41 IST
Last Updated 27 ಫೆಬ್ರುವರಿ 2018, 19:41 IST
ಮಂಜಪ್ಪ, ಜಿ.ಎನ್‌.ರಾಮದಾಸ್‌, ವಿಜ್ಞಾನಿ ಪ್ರವೀಣ್‌ ಕಣ್ವತೀರ್ಥ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕಿ ಡಿ.ಆರ್‌.ಭವ್ಯ, ಶಾಲೆಯ ಅಧ್ಯಕ್ಷ ರಂಗಾಚಾರ್‌, ವಕೀಲ ಲಕ್ಷ್ಮಣಮೂರ್ತಿ ಇದ್ದಾರೆ
ಮಂಜಪ್ಪ, ಜಿ.ಎನ್‌.ರಾಮದಾಸ್‌, ವಿಜ್ಞಾನಿ ಪ್ರವೀಣ್‌ ಕಣ್ವತೀರ್ಥ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕಿ ಡಿ.ಆರ್‌.ಭವ್ಯ, ಶಾಲೆಯ ಅಧ್ಯಕ್ಷ ರಂಗಾಚಾರ್‌, ವಕೀಲ ಲಕ್ಷ್ಮಣಮೂರ್ತಿ ಇದ್ದಾರೆ   

ನೆಲಮಂಗಲ: ದಾಸನಪುರದ ವೈಷ್ಣವ ಸಭಾದ ಆಚಾರ್ಯ ಗುರುಪರಂಪರಾ ವಿದ್ಯಾಲಯದಲ್ಲಿ ‘ಸಂಸ್ಕೃತಿ ಉತ್ಸವ’ ನಡೆಯಿತು.

ಮಣ್ಣಿನ ವಾಸನೆ ಗೊತ್ತಿಲ್ಲದ ಮಕ್ಕಳಿಗೆ ಪ್ರಕೃತಿಯ ಪರಿಚಯ ಮಾಡಿಕೊಡಬೇಕು. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದನ್ನು ಕಲಿಸಬೇಕು. ಸ್ವತಂತ್ರವಾಗಿ ಹಾರಲು ಬಿಡಬೇಕು ಎಂದು ಶಿವಮೊಗ್ಗದ ಪ್ರಗತಿಪರ ರೈತ ಮಂಜಪ್ಪ ಸಲಹೆ ನೀಡಿದರು.

ನಿವೃತ್ತ ಲೆಫ್ಟಿನೆಂಟ್‌ ಕರ್ನಲ್‌ ಜಿ.ಎನ್‌.ರಾಮದಾಸ್‌, ‘ವೃತ್ತಿ ನಿಷ್ಠೆ ಮತ್ತು ಕಠಿಣ ಪರಿಶ್ರಮ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ’ ಎಂದು ತಿಳಿಸಿದರು.

ADVERTISEMENT

ಕನಕದಾಸ, ನಾಟ್ಯರಾಣಿ ಶಾಂತಲೆಗೆ ಸಂಬಂಧಿಸಿದ ನಾಟಕ, ಒನಕೆ ಓಬವ್ವಳ ನೃತ್ಯರೂಪಕ, ದೇಶಾಭಿಮಾನ ಮೂಡಿಸುವ, ರೈತರು ಹಾಗೂ ಸೈನಿಕರಿಗೆ ಗೌರವ ಸಲ್ಲಿಸುವ ನೃತ್ಯ, ಯೋಗ ಪ್ರದರ್ಶನ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.