ADVERTISEMENT

ಚಾರಿತ್ರ್ಯ ರೂಪಿಸುವುದು ಶಿಕ್ಷಣದ ಗುರಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2012, 19:30 IST
Last Updated 24 ಜೂನ್ 2012, 19:30 IST

ಯಲಹಂಕ: `ಮಕ್ಕಳಲ್ಲಿ ಉತ್ತಮವಾದ ಚಾರಿತ್ರ್ಯವನ್ನು ರೂಪಿಸುವುದು ಶಿಕ್ಷಣದ ಮೊಟ್ಟ ಮೊದಲ ಧ್ಯೇಯ~ ಎಂದು ತುಮಕೂರು ರಾಮಕೃಷ್ಣ ಮಠದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಉಪನಗರದ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ ಮೊದಲನೇ ವರ್ಷದ ಪಿಯುಸಿ ಮತ್ತು ಪದವಿ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, `ಶಿಕ್ಷಣದ ಮೂಲಕ ಮಕ್ಕಳಲ್ಲಿ ಒಳ್ಳೆಯ ಆಲೋಚನೆಗಳು ಬರಬೇಕು. ಉತ್ತಮ ಚಾರಿತ್ರ್ಯವಂತರಾದರೆ ಮಕ್ಕಳ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ~ ಎಂದು ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ಗೃಹ ಮಂಡಳಿಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಜಿ.ವಿ.ಕೊಂಗವಾಡ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಹೊನ್ನಪ್ಪ, ಮಾಜಿ ಅಧ್ಯಕ್ಷ ಎನ್.ಸಿ.ರಾಜಶೇಖರಯ್ಯ, ಪ್ರಾಂಶುಪಾಲ ವಿ.ಎಸ್.ನಂಜುಂಡಪ್ಪ, ಶೇಷಾದ್ರಿಪುರ ಕಾಲೇಜಿನ ಮಾಜಿ ಟ್ರಸ್ಟಿ ವೀರಭದ್ರಯ್ಯ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.