ADVERTISEMENT

ಜನರಲ್ಲಿ ಅರಿವು ಮೂಡಿಸಲು ಜಾಥಾ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 19:30 IST
Last Updated 9 ಮಾರ್ಚ್ 2012, 19:30 IST

ಬೆಂಗಳೂರು: `ಗ್ಲಾಕೊಮಾದ ಕುರಿತು ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾರ್ಚ್ 11ರಂದು ಭಾನುವಾರ  ಸ್ವಾತಂತ್ರ್ಯ ಉದ್ಯಾನದಿಂದ ಎಂ.ಜಿ.ರಸ್ತೆಯವರೆಗೆ ಜಾಥಾ ಆಯೋಜಿಸಲಾ ಗಿದ್ದು, ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಉದ್ಘಾಟಿಸಲಿದ್ದಾರೆ~ ಎಂದು ಬೆಂಗಳೂರು ಅಪ್ತಲಮಿಕ್ ಸೊಸೈಟಿಯ ಕಾರ್ಯದರ್ಶಿ ಡಾ. ಎಂ.ಎಸ್. ರವೀಂದ್ರ ತಿಳಿಸಿದರು.

`ಯಾವುದೇ ರೀತಿಯ ಕಣ್ಣಿನ ಸಮಸ್ಯೆಗಳು ಎದುರಾದಾಗ ವಿಳಂಬ ಮಾಡದೇ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ. ಯಾವುದೇ ನಿರ್ದಿಷ್ಟ ಕಾರಣಗಳಿಲ್ಲದೇ, ಮುನ್ಸೂಚನೆ ನೀಡದೇ ಗ್ಲಾಕೊಮಾ ಕಾಯಿಲೆಯು ಕಣ್ಣನ್ನು ಆವರಿಸಬಹುದು~ ಎಂದು ಹೇಳಿದರು.

`ಕಣ್ಣಿನ ದೃಷ್ಟಿಯ ನರಕ್ಕೆ ಆಗುವ ಹಾನಿಯಿಂದ ಗ್ಲಾಕೋಮಾ ಕಾಯಿಲೆ ಉಂಟಾಗುತ್ತದೆ. 40 ವರ್ಷದ ಬಳಿಕ ವರ್ಷದಲ್ಲಿ ಎರಡು ಸಲ ಕಣ್ಣಿನ ಪೂರ್ಣ ಪರೀಕ್ಷೆ ಮಾಡಿಸುವುದು ಒಳಿತು. ಆರಂಭಿಕ ಹಂತದಲ್ಲಿ ಈ ಕಾಯಿಲೆಯನ್ನು ಪತ್ತೆ ಹಚ್ಚಿದರೆ ದೃಷ್ಟಿ ಕಳೆದುಕೊಳ್ಳುವುದನ್ನು ತಪ್ಪಿಸಬಹುದು~ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಕಣ್ಣಿನ ನಾಳಗಳಲ್ಲಿ ಉತ್ಪತ್ತಿಯಾಗುವ ದ್ರವ ಖಾಲಿಯಾಗಿ ಮತ್ತೆ ತುಂಬುತ್ತದೆ. ಆದರೆ ಈ ದ್ರವ ಖಾಲಿಯಾಗದಿ ದ್ದಾಗ ಒತ್ತಡ ಹೆಚ್ಚಾಗಿ ದೃಷ್ಟಿಯ ನರಕ್ಕೆ ಹಾನಿಯಾಗುತ್ತದೆ. ಇದು ಗ್ಲಾಕೊಮಾ ದಂತಹ ಕಾಯಿಲೆಗೆ ಅವಕಾಶ ಮಾಡಿ ಕೊಡುತ್ತದೆ~ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.