ADVERTISEMENT

ಜನರಿಗೆ ಬೇಕಿವೆ ಉತ್ತಮ ರಸ್ತೆಗಳು

‘ಮೈ ಸಿಟಿ ಮೈ ಬಜೆಟ್‌’ ಅಭಿಯಾನದ ಮೂಲಕ ಅಭಿಪ್ರಾಯ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 19:30 IST
Last Updated 5 ಡಿಸೆಂಬರ್ 2016, 19:30 IST
ಜನರಿಗೆ ಬೇಕಿವೆ ಉತ್ತಮ ರಸ್ತೆಗಳು
ಜನರಿಗೆ ಬೇಕಿವೆ ಉತ್ತಮ ರಸ್ತೆಗಳು   

ಬೆಂಗಳೂರು: ಬಿಬಿಎಂಪಿ ಸಹಯೋಗದೊಂದಿಗೆ ‘ಜನಾಗ್ರಹ’ ಸಂಸ್ಥೆ ನಡೆಸಿದ ‘ಮೈ ಸಿಟಿ ಮೈ ಬಜೆಟ್‌’ ಅಭಿಯಾನದಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗ ಸುಧಾರಣೆ ವಿಷಯವಾಗಿಯೇ ಹೆಚ್ಚಿನ ಸಲಹೆಗಳು ಬಂದಿವೆ.

ಈ ಅಭಿಯಾನದಲ್ಲಿ  59,451 ಜನ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಕ್ಟೋಬರ್‌ 3ರಂದು ಈ ಅಭಿಯಾನವನ್ನು ಆರಂಭಿಸಲಾಗಿತ್ತು. ಅಭಿಯಾನದ ಉದ್ದೇಶಕ್ಕಾಗಿ ವಿಶೇಷ ಬಜೆಟ್‌ ಬಸ್‌ ವ್ಯವಸ್ಥೆ ಮಾಡಲಾಗಿತ್ತು. 160 ವಾರ್ಡ್‌ಗಳಲ್ಲಿ 52 ದಿನಗಳವರೆಗೆ ಪಯಣಿಸಿತ್ತು. ಬಜೆಟ್ ಬಸ್‌ ಒಟ್ಟಾರೆ 1,560 ಕಿ.ಮೀ. ಸಂಚರಿಸಿದೆ.

ಅಭಿಯಾನದ ಸಂದರ್ಭದಲ್ಲಿ ನಗರದಾದ್ಯಂತ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳಲ್ಲಿ 104, ಹಿಂದುಳಿದ ಪ್ರದೇಶಗಳಲ್ಲಿ 32 ಕಾರ್ಯಾಗಾರಗಳನ್ನು ನಡೆಸಲಾಗಿದೆ.ರಸ್ತೆ ಮತ್ತು ಪಾದಚಾರಿ ಮಾರ್ಗಗಳ ನಿರ್ವಹಣೆಯು ನಾಗರಿಕರ ದೃಷ್ಟಿಯಲ್ಲಿ ಮೊದಲ ಆದ್ಯತೆ ವಿಷಯವಾಗಿದೆ. ಬಂದಿರುವ ಸಲಹೆಗಳಲ್ಲಿ ಶೇ 38ರಷ್ಟು ಈ ಸೌಕರ್ಯಕ್ಕೆ ಸಂಬಂಧಿಸಿವೆ.

ನಂತರದಲ್ಲಿ ಆರೋಗ್ಯ ಮತ್ತು ನೈರ್ಮಲೀಕರಣಕ್ಕೆ ಒತ್ತು ನೀಡಲಾಗಿದೆ. ಅಭಿಪ್ರಾಯ ಸಂಗ್ರಹಿಸುವಾಗ ನಾಗರಿಕರಿಗೆ ಅನುಕೂಲವಾಗಲೆಂದು 11 ಮುಖ್ಯ ಮತ್ತು 80 ಉಪವರ್ಗಗಳ ಸೂಚಕ ಪಟ್ಟಿಯನ್ನು ನೀಡಲಾಗಿತ್ತು.

‘ನಗರದ ಅಭಿವೃದ್ಧಿಗಾಗಿ ಅಭಿಪ್ರಾಯ ಸಂಗ್ರಹಿಸಲು ನಡೆಸಿದ ಅಭಿಯಾನದಲ್ಲಿ ಒಳ್ಳೆಯ ಸಲಹೆಗಳು ಬಂದಿದ್ದು, ಬಜೆಟ್‌ ಸಿದ್ಧಪಡಿಸುವಾಗ ಅವುಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.