ಬೆಂಗಳೂರು: ಜಪಾನ್‌ನ ನಗ್ಯಾನೊ ನಗರದಲ್ಲಿ ವಾಣಿಜ್ಯ ಉದ್ಯಮ ಸ್ಥಾಪನೆಗೆ ಪೂರಕ ವಾತಾವರಣವಿದ್ದು, ಇಲ್ಲಿ ಹೂಡಿಕೆ ಮಾಡುವಂತೆ ಅಲ್ಲಿನ ವಿದೇಶಿ ವ್ಯಾಪಾರ ಸಂಘಟನೆ (ಜೆಟ್ರೊ) ಉದ್ಯಮಿಗಳಿಗೆ ಆಹ್ವಾನ ನೀಡಿದೆ.
ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು (ಎಫ್‌ಕೆಸಿಸಿಐ) ಜೆಟ್ರೊ ಸಹಯೋಗದಲ್ಲಿ ಇಲ್ಲಿ ಆಯೋಜಿಸಿದ್ದ ‘ಜಪಾನ್‌ನಲ್ಲಿ ವ್ಯಾಪಾರ ಅವಕಾಶಗಳು’ ಕುರಿತ ಸಂವಾದದಲ್ಲಿ ಮಾತನಾಡಿದ ಸಂಘಟನೆಯ ಸಹಾಯಕ ನಿರ್ದೇಶಕ ಯೊ ಸುಚಿಡಾ, ‘ಉತ್ತಮ ಮೂಲಸೌಕರ್ಯ ಹೊಂದಿರುವ ನಗ್ಯಾನೊ ನಗರವು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಹಾಗೂ ಆಹಾರ ಉತ್ಪನ್ನ ಸಂಸ್ಕರಣೆಗೆ ಸಂಬಂಧಿಸಿದ ಉದ್ದಿಮೆ ಸ್ಥಾಪನೆಗೆ ಪ್ರಶಸ್ತ ತಾಣ. ಅಲ್ಲಿ ಉದ್ಯಮ ಆರಂಭಿಸುವವರಿಗೆ ಜೆಟ್ರೊ ಸಹಾಯ ಮಾಡಲಿದೆ’ ಎಂದರು.
‘ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಜಪಾನ್ ಬ್ಯಾಂಕ್‌ಗಳು ಸಾಲ ನೀಡಲಿವೆ. ಅರ್ಹ ಕೈಗಾರಿಕೆಗಳಿಗೆ ಸರ್ಕಾರ ಸಬ್ಸಿಡಿಯನ್ನೂ ನೀಡಲಿದೆ’ ಎಂದರು.
‘ನಗ್ಯಾನೊ ನಗರ ಪ್ರವಾಸೋದ್ಯಮ ಆರಂಭಿಸುವುದಕ್ಕೂ ಸೂಕ್ತ ತಾಣ’ ಎಂದು ಜೆಟ್ರೊದ ಮಹಾನಿರ್ದೇಶಕಿ ಅಕಿಕೋ ಒಕುಮುರಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.