ADVERTISEMENT

ಡಾ. ರಾಜೇಗೌಡ ಕೃಷಿ ವಿ.ವಿ ಕುಲಸಚಿವ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:31 IST
Last Updated 6 ಮಾರ್ಚ್ 2014, 19:31 IST

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಂಗಾಮಿ ಕುಲಸಚಿವರನ್ನಾಗಿ ವಿ.ವಿ ಕೃಷಿ ಹವಾ­ಮಾನ ವಿಭಾಗದ ಮುಖ್ಯಸ್ಥ ಡಾ. ಎಂ.ಬಿ.­ರಾಜೇಗೌಡ ಅವರನ್ನು ನೇಮಕ ಮಾಡಲಾಗಿದೆ.

ಇದುವರೆಗೆ ಕುಲಸಚಿವರಾಗಿದ್ದ ಡಾ.ಎಚ್‌.ವಿ.ನಂಜಪ್ಪ ಅವರು ನಿವೃತ್ತರಾಗಿದ್ದರಿಂದ ಈ ನೇಮಕ ಮಾಡಲಾಗಿದೆ. ಪೂರ್ಣಾವಧಿಗೆ ಕುಲಸಚಿವರು ನೇಮಕ ಆಗುವವರೆಗೆ ಅವರು ಅಧಿಕಾರದಲ್ಲಿ ಇರಲಿದ್ದಾರೆ. ಕೃಷಿ ಹವಾಮಾನ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಸಂಶೋಧನೆ ನಡೆಸಿದ ಅನುಭವ ಅವರದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.