ADVERTISEMENT

ತನಿಖಾಧಿಕಾರಿ ಬದಲಾಯಿಸಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2012, 19:30 IST
Last Updated 2 ನವೆಂಬರ್ 2012, 19:30 IST

ಬೆಂಗಳೂರು: ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ವಿರುದ್ಧ ತಾವು ಸಲ್ಲಿಸಿರುವ ಖಾಸಗಿ ದೂರಿಗೆ ಸಂಬಂಧಿಸಿದ ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸುವಂತೆ ಕೋರಿ ದೂರುದಾರ ಆರ್.ಶ್ರೀನಿವಾಸಮೂರ್ತಿ ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ನ್ಯಾಯಾಲಯಕ್ಕೆ ಲಿಖಿತ ಮನವಿ ಸಲ್ಲಿಸಿದ ಶ್ರೀನಿವಾಸಮೂರ್ತಿ ಪರ ವಕೀಲರು, `ಪ್ರಕರಣದಲ್ಲಿ ಸಾಕ್ಷಿದಾರರಾಗಿರುವ ಲಕ್ಷ್ಮೀನಾರಾಯಣ ಅವರನ್ನು ಇತ್ತೀಚೆಗೆ ಭೇಟಿ ಮಾಡಿರುವ ಶಿವಶಂಕರ್ ದೂರಿನ ಬಗ್ಗೆಯೇ ಮಾತುಕತೆ ನಡೆಸಲು ಪ್ರಯತ್ನಿಸಿದ್ದಾರೆ. ಸದ್ಯ ಅವರ ವಿರುದ್ಧದ ತನಿಖೆಯನ್ನು ಲೋಕಾ ಯುಕ್ತದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ವಹಿಸಲಾಗಿದೆ. ಆದರೆ, ಅವರ ಮೇಲೆ ನಮಗೆ ವಿಶ್ವಾಸ ಇಲ್ಲ. ಆದ್ದರಿಂದ ಪ್ರಕರಣದ ತನಿಖೆಯನ್ನು ಬೇರೊಬ್ಬರಿಗೆ ಒಪ್ಪಿಸಬೇಕು~ ಎಂದು ಕೋರಿದರು.

ಮೈಸೂರು ರಸ್ತೆಯಲ್ಲಿರುವ ಗೆಳೆಯ ರೊಬ್ಬರ ಮನೆಯಲ್ಲಿ ಶಿವಶಂಕರ್ ಅವರು ಲಕ್ಷ್ಮೀನಾರಾಯಣ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇಬ್ಬರ ನಡುವಿನ ಮಾತು ಕತೆಯ ವಿವರಗಳನ್ನು ಒಳಗೊಂಡ ಸಿ.ಡಿ. ಯನ್ನೂ ನ್ಯಾಯಾಲಯಕ್ಕೆ ವಕೀಲರು ಸಲ್ಲಿಸಿದ್ದಾರೆ.

`ಅಯ್ಯಪ್ಪ ವಿರುದ್ಧ ಲಂಚದ ಆರೋ ಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಾನು ಅವರಿಗೆ ಮಾಹಿತಿ ನೀಡಿದ್ದೇನೆ ಎಂಬುದು ನಿರಾಧಾರ. ದೂರಿನಲ್ಲಿ ಉಲ್ಲೇಖಿಸಿರು ವಂತೆ ಸೆಪ್ಟೆಂಬರ್ 24ರಂದು ನಾನು ಕಚೇರಿಯಲ್ಲಿ ಇರಲಿಲ್ಲ. ಯಾವ ಕಾರಣ ಕ್ಕಾಗಿ ನನ್ನ ವಿರುದ್ಧ ದೂರು ನೀಡಿದ್ದೀರಿ? ಇದರ ಹಿಂದೆ ಯಾರಿದ್ದಾರೆ? ನಿಮಗೆ ಏನು ಬೇಕಿದೆ?~ ಎಂಬುದಾಗಿ ಮಾತುಕತೆ ವೇಳೆ ಶಿವಶಂಕರ್ ಅವರು ಲಕ್ಷ್ಮೀನಾರಾ ಯಣ ಅವರಿಗೆ ಪ್ರಶ್ನಿಸಿದ್ದಾರೆ ಎಂದು ದೂರುದಾರರ ಪರ ವಕೀಲರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.