ADVERTISEMENT

ತರಬೇತಿನಿರತ ಕಾನ್‌ಸ್ಟೆಬಲ್‌ಗಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST
ಸರ್ಕಾರಿ ಅಸ್ಪತ್ರೆ ಆವರಣದಲ್ಲಿ ಅಸ್ವಸ್ಥಗೊಂಡ ಸಿಬ್ಬಂದಿಯನ್ನು ಚಿಕಿತ್ಸೆಗೆ ಕರೆತರುತ್ತಿರುವುದು
ಸರ್ಕಾರಿ ಅಸ್ಪತ್ರೆ ಆವರಣದಲ್ಲಿ ಅಸ್ವಸ್ಥಗೊಂಡ ಸಿಬ್ಬಂದಿಯನ್ನು ಚಿಕಿತ್ಸೆಗೆ ಕರೆತರುತ್ತಿರುವುದು   

ದೇವನಹಳ್ಳಿ: ‘ರಾಜ್ಯ ಕೈಗಾರಿಕಾ ಭದ್ರತಾ ಪೊಲೀಸ್‌ ತರಬೇತಿ ಕೇಂದ್ರ’ದಲ್ಲಿ ಗುರುವಾರ ನೀಡಿದ್ದ ಆಹಾರ ಸೇವಿಸಿ, ತರಬೇತಿನಿರತ 21 ಕಾನ್‌ಸ್ಟೆಬಲ್‌ಗಳು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಳಿಗೇಹಳ್ಳಿ ಗ್ರಾಮದ ಬಳಿ ಇರುವ ತರಬೇತಿ ಕೇಂದ್ರದಲ್ಲಿ ಬೆಳಿಗ್ಗೆ ಉಪಾಹಾರವಾಗಿ ಚಿತ್ರಾನ್ನ ನೀಡಲಾಗಿತ್ತು. ಮಧ್ಯಾಹ್ನ ಊಟಕ್ಕೆ ಪೂರಿಮಾಡಿಕೊಡಲಾಗಿತ್ತು ಸೇವಿಸಿದ್ದ ಕಾನ್‌ಸ್ಟೆಬಲ್‌ಗಳು,‌ ವಾಂತಿ ಮಾಡಿಕೊಂಡಿದ್ದರು. ಹೊಟ್ಟೆ ನೋವಿನಿಂದ ನರಳಾಡುತ್ತಿದ್ದರು. ಸದ್ಯ ಅವರೆಲ್ಲರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.‌

ಕಾನ್‌ಸ್ಟೆಬಲ್‌ಗಳು ಅಸ್ವಸ್ಥಗೊಂಡ ಬಗ್ಗೆ ವರದಿ ಮಾಡಲು ಹೋಗಿದ್ದ ಮಾಧ್ಯಮದವರಿಗೆ, ಕೇಂದ್ರದೊಳಗೆ ಪ್ರವೇಶ ನಿರ್ಬಂಧಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.