
ಪ್ರಜಾವಾಣಿ ವಾರ್ತೆನೆಲಮಂಗಲ: ಇತಿಹಾಸ ಪೂರ್ವ ಕಾಲದ ಪ್ರಭೇದ ಒಂದರಿಂದ ವಿಕಾಸ ಹೊಂದಿರಬಹುದಾದ ತೆಂಗಿನಕಾಯಿ ಗಾತ್ರದ ನಾಗಲಿಂಗ ರೂಪದ ಏಕಮುಖ ರುದ್ರಾಕ್ಷಿಯೊಂದು ಸೃಷ್ಟಿಯ ಅಚ್ಚರಿಗೆ ಕನ್ನಡಿ ಹಿಡಿದಿದೆ.
ಮೆಣಸಿನ ಕಾಳಿನ ಗಾತ್ರದಿಂದ ಅಡಿಕೆಕಾಯಿ ಗಾತ್ರದ ರುದ್ರಾಕ್ಷಿಗಳನ್ನು ನಾವು ನೋಡಿದ್ದೇವೆ. ಆದರೆ ತೆಂಗಿನಕಾಯಿ ಗಾತ್ರದ ಎರಡು ಕಿಲೊ ತೂಕದ ರುದ್ರಾಕ್ಷಿ ಮೇಲೆ ಲಿಂಗಾಕೃತಿ, ಅದರ ಮೇಲೆ ನಾಗರ ಹೆಡೆಯ ರೂಪದ ಏಕಮುಖ ರುದ್ರಾಕ್ಷಿ ಆಕರ್ಷಕವಾಗಿದೆ.
ದಾಸನಪುರ ಹೋಬಳಿಯ ಚಿಕ್ಕನಾಯಕನಪಾಳ್ಯದ ಶ್ರೀಪ್ರಶಾಂತ ಚಾಮುಂಡೇಶ್ವರಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ವಿಶೇಷ ರುದ್ರಾಕ್ಷಿಯನ್ನು ಭಕ್ತರ ದರ್ಶನಕ್ಕೆ ಇಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.