ADVERTISEMENT

‘ನಗರದಲ್ಲಿ ಡ್ರಗ್ಸ್‌ ಮಾಫಿಯಾ’

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST

ಬೆಂಗಳೂರು: ನಗರದಲ್ಲಿ ಡ್ರಗ್ಸ್ ಮಾಫಿಯಾ ವ್ಯಾಪಕವಾಗಿದೆ ಎಂದು ಶಾಸಕ ಆರ್‌. ಅಶೋಕ್‌ ಅವರು ಆರೋಪಿಸಿದರು.

ಪೀಣ್ಯ ದಾಸರಹಳ್ಳಿಯ ಬಾಗಲಗುಂಟೆಯಲ್ಲಿ ನಡೆದ ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಪೊಲೀಸರನ್ನು ಆರು ತಿಂಗಳಿಗೊಮ್ಮೆ ವರ್ಗಾವಣೆ ಮಾಡಲಾಗುತ್ತಿದೆ. ಪೊಲೀಸರ ಸ್ಥೈರ್ಯ ಕುಗ್ಗಿದೆ. ನಗರ ವಾಸಕ್ಕೆ ಯೋಗ್ಯವಾಗಿಲ್ಲ. ರೆಸ್ಟೊರೆಂಟ್‌ಗೆ ಊಟಕ್ಕೆ ಹೋಗುವಂತಿಲ್ಲ. ಗೂಂಡಾಗಳ ಕಾಟ ಮಿತಿಮೀರಿದೆ. ಸರಗಳ್ಳರ ಹಾವಳಿ ಜಾಸ್ತಿಯಾಗಿದ್ದು, ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ’ ಎಂದು ದೂರಿದರು.

ADVERTISEMENT

ಸಂಸದ ಪ್ರಹ್ಲಾದ್ ಜೋಷಿ, ‘ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕ್ರಿಮಿನಲ್‌ ಗಳನ್ನು ಮಟ್ಟ ಹಾಕಬೇಕು’ ಎಂದು ಒತ್ತಾಯಿಸಿದರು.

ಶಾಸಕ ಎಸ್.ಮುನಿರಾಜು, ‘ಬೆಂಗಳೂರು ರಕ್ಷಿಸಿ ಪಾದಯಾತ್ರೆಗೆ ಎಲ್ಲ ಕಡೆ ಬೆಂಬಲ ಸಿಗುತ್ತಿದೆ. ಸಂಚಾರ ದಟ್ಟಣೆ, ಕಸ, ಗುಂಡಿಬಿದ್ದ ರಸ್ತೆ ಹಾಗೂ ಕೆರೆಗೆ ಹರಿಯುವ ವಿಷದಿಂದ ಬೆಂಗಳೂರನ್ನು ರಕ್ಷಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.